ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಂ ನವಾಜ್ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿದೆ.
ಆರ್ಥಿಕ ಅಪರಾಧಗಳಲ್ಲಿ ಭಾಗಿಯಾದವರಿಗೆ ದೇಶದಿಂದ ಹೊರಹೋಗಲು ಅವಕಾಶ ನೀಡಲಾಗುವುದಿಲ್ಲ ಎಂದು ಪಾಕ್ ಸರ್ಕಾರ ಹೇಳಿರುವುದಾಗಿ ‘ಡಾನ್ ನ್ಯೂಸ್’ ಸೋಮವಾರ ವರದಿ ಮಾಡಿದೆ.
ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಮರಿಯಂ ಮನವಿ ಸಲ್ಲಿಸಿದ್ದರು. ಕಾನೂನು ಸಚಿವರ ನೇತೃತ್ವದ ಉಪಸಮಿತಿ ಇದನ್ನು ತಿರಸ್ಕರಿಸಿದೆ.
ಪಿಎಂಎಲ್–ಎನ್ ಉಪಾಧ್ಯಕ್ಷೆಯೂ ಆಗಿರುವ ಮರಿಯಂ ಭ್ರಷ್ಟಾಚಾರ ಪ್ರಕರಣ
ದಲ್ಲಿ ಆರೋಪಿಯಾಗಿದ್ದಾರೆ. 2018ರ ಆಗಸ್ಟ್‌ನಿಂದ ಅವರನ್ನು ‘ವಿದೇಶ ಪ್ರಯಾಣ ನಿರ್ಬಂಧ’ ಪಟ್ಟಿಯಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.