ADVERTISEMENT

ಮಸೂದ್‌ಗೆ ನಿಷೇಧ: ಅಮೆರಿಕ ಹೇಳಿಕೆಗೆ ಚೀನಾ ಆಕ್ಷೇಪ

ಪಿಟಿಐ
Published 3 ಏಪ್ರಿಲ್ 2019, 20:21 IST
Last Updated 3 ಏಪ್ರಿಲ್ 2019, 20:21 IST
   

ಬೀಜಿಂಗ್‌: ಜೈಷ್‌–ಎ–ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ಗೆ ನಿಷೇಧ ಹೇರಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸುವುದಾಗಿ ಅಮೆರಿಕ ನೀಡಿರುವ ಹೇಳಿಕೆಗೆ ಚೀನಾ ಕಿಡಿಕಾರಿದೆ.

ಅಮೆರಿಕದ ನಡವಳಿಕೆಯಿಂದ ಈ ವಿಷಯ ಮತ್ತಷ್ಟು ಬಿಗಡಾಯಿಸಿದೆ ಮತ್ತು ದಕ್ಷಿಣ ಏಷ್ಯಾದಲ್ಲಿನ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆಯಾಗಲಿದೆ ಎಂದು ಹೇಳಿದೆ.

‘ಚೀನಾ ಸಕಾರಾತ್ಮಕವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ, ಅಮೆರಿಕ ಕರಡು ನಿರ್ಣಯವನ್ನು ಮಂಡಿಸಲು ಪ್ರಯತ್ನಿಸುತ್ತಿರುವುದು ಅರ್ಥವಿಲ್ಲದ್ದು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಷವಾಂಗ್‌ ತಿಳಿಸಿದ್ದಾರೆ.

ADVERTISEMENT

‘ಮುಂದಿನ ದಿನಗಳಲ್ಲೂ ಚೀನಾ ರಚನಾತ್ಮಕವಾದ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.