ADVERTISEMENT

ಮೆಕ್ಸಿಕೊದಲ್ಲಿ ಮತ್ತೊಬ್ಬ ಮೇಯರ್‌ ಅಭ್ಯರ್ಥಿ ಕೊಲೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 7:46 IST
Last Updated 27 ಮೇ 2021, 7:46 IST
ಮೆಕ್ಸಿಕೊ ಅಧ್ಯಕ್ಷ ಲೇಪೆಜ್‌ ಒಬ್ರಡೋರ್‌
ಮೆಕ್ಸಿಕೊ ಅಧ್ಯಕ್ಷ ಲೇಪೆಜ್‌ ಒಬ್ರಡೋರ್‌   

ಮೆಕ್ಸಿಕೊ ಸಿಟಿ (ಎಪಿ): ಮೆಕ್ಸಿಕೊದಲ್ಲಿ ಮತ್ತೊಬ್ಬ ಮೇಯರ್‌ ಅಭ್ಯರ್ಥಿಯ ಹತ್ಯೆ ನಡೆದಿದೆ. ಈ ಮೂಲಕ ಮೆಕ್ಸಿಕೊದಲ್ಲಿ ಚುನಾವಣೆಗೆ ಮುನ್ನ ನಡೆಯುತ್ತಿರುವ ಹಿಂಸಾಚಾರದಲ್ಲಿ ಒಟ್ಟು 34 ಅಭ್ಯರ್ಥಿಗಳು ಹತ್ಯೆಗೀಡಾಗಿದ್ದಾರೆ. ಜೂನ್‌ 6 ರಂದು ಮೆಕ್ಸಿಕೊದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.

ಅಭ್ಯರ್ಥಿ ಆಲ್ಮ ಬರ್ರಾಗನ್‌ ಜುವನಾಜುವಾಟೊ ರಾಜ್ಯದ ಮೊರೊಲಿಯನ್‌ ನಗರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನ್ಯುಯೆಲ್‌ ಲೋಪೆಜ್‌ ಒಬ್ರೆಡಾರ್‌, ಸಂಘಟಿತ ಪಾತಕಿಗಳ ಗುಂಪು ಈ ಕೊಲೆ ನಡೆಸಿದೆ ಎಂಬುದರಲ್ಲಿ ನಮಗೆ ಯಾವುದೇ ಅನುಮಾನವಿಲ್ಲ. ಹತ್ಯೆಯಾಗಿರುವ 34 ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪೈಪೋಟಿ ನಡೆಸಿದ್ದರು. ತಮ್ಮ ಪರವಾಗಿರುವ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ದುರುದ್ದೇಶದಿಂದ ಪಾತಕಿಗಳ ಗುಂಪು ಈ ರೀತಿ ಹತ್ಯೆ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮೆಕ್ಸಿಕೊದ ಚುನಾವಣಾ ಇತಿಹಾಸದಲ್ಲಿ ಇದು ಅತ್ಯಂತ ಹಿಂಸಾತ್ಮಕ ಚುನಾವಣೆ. ಜನರು ಚುನಾವಣೆಯಲ್ಲಿ ಸ್ಪರ್ಧಿಸಲು ಹೆದರುವಂಥ ಪರಿಸ್ಥಿತಿ ಎದುರಾಗಿದೆ. ಇದನ್ನು ಸಾಮಾನ್ಯ ಬೆಳವಣಿಗೆ ಎಂದು ನಾವು ಪರಿಗಣಿಸುವುದಿಲ್ಲ ಎಂದು ಅಧ್ಯಕ್ಷ ಲೋಪೆಜ್‌ ಒಬ್ರೆಡಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.