ಮೆಹುಲ್ ಚೋಕ್ಸಿ
ಲಂಡನ್ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ಮೆಹುಲ್ ಚೋಸ್ಕಿ ಅವರು ಭಾರತ ಸರ್ಕಾರ ಹಾಗೂ ಐವರ ವಿರುದ್ಧ ಮೊಕದ್ದಮೆ ಹೂಡಿದ್ಧಾರೆ.
ಭಾರತ ಸರ್ಕಾರ ಹಾಗೂ ಇತರ ಐವರ ವಿರುದ್ಧ, ‘ಅಪಹರಣ ಹಾಗೂ ಚಿತ್ರಹಿಂಸೆ’ಯ ಆರೋಪ ಹೊರಿಸಿ ಹಾಗೂ ತಮ್ಮನ್ನು ಭಾರತಕ್ಕೆ ಒಪ್ಪಿಸುವುದನ್ನು ಪ್ರಶ್ನಿಸಿ ಅವರು ಲಂಡನ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.
ನ್ಯಾಯಮೂರ್ತಿ ಫ್ರೀಡ್‌ಮನ್ ನೇತೃತ್ವದಲ್ಲಿ ಸೋಮವಾರ ನಡೆದ ವಿಚಾರಣೆ ವೇಳೆ, ‘ಭಾರತ ಸರ್ಕಾರ 2021ರ ಮೇನಲ್ಲಿ ನನ್ನನ್ನು ಅಪಹರಿಸಲು ಯತ್ನಿಸಿತ್ತು. ಈ ಯತ್ನದ ಭಾಗವಾಗಿ ನನಗೆ ಚಿತ್ರಹಿಂಸೆ ನೀಡಲಾಯಿತು’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭಃರತೀಯ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.