ADVERTISEMENT

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ರಾಯಿಟರ್ಸ್
Published 9 ಜುಲೈ 2020, 3:50 IST
Last Updated 9 ಜುಲೈ 2020, 3:50 IST
ಮೆಲನಿಯಾ ಟ್ರಂಪ್‌ ಪ್ರತಿಮೆ
ಮೆಲನಿಯಾ ಟ್ರಂಪ್‌ ಪ್ರತಿಮೆ   

ವಾಷಿಂಗ್ಟನ್‌: ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್‌ ಅವರ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ತಡವಾಗಿ ವರದಿಯಾಗಿದೆ.

ಮೆಲನಿಯಾ ಟ್ರಂಪ್‌ ಅವರು ಹುಟ್ಟೂರು ಸ್ಲೊವೇನಿಯಾದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಜುಲೈ 4ರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಂದೇ ( ಜುಲೈ 4) ಪ್ರತಿಮೆಗೆ ಬೆಂಕಿ ಹಚ್ಚಲಾಗಿದೆ.

ಪೊಲೀಸರು ಮಾಹಿತಿ ನೀಡಿದ ಕೂಡಲೇ ವಿರೂಪಗೊಂಡಿದ್ದ ಪ್ರತಿಮೆಯನ್ನು ತೆಗೆಯಲಾಗಿದೆ ಎಂದು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದ ಜರ್ಮನಿ ಮೂಲದ ಅಮೆರಿಕ ಕಲಾವಿದ ಬ್ರ್ಯಾಡ್‌ ಡೌನಿ ತಿಳಿಸಿದ್ದಾರೆ.

ADVERTISEMENT

ಅವರು ಪ್ರತಿಮೆಯನ್ನು ಯಾಕೆ ವಿರೂಪಗೊಳಿಸಿದರು ಎಂದು ನಾನು ಕೇಳಲು ಬಯಸುತ್ತೇನೆ. ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಕಿಡಿಯನ್ನು ಶಮನಗೊಳಿಸಲು ತ್ವರತವಾಗಿ ಮಾತುಕತೆ ನಡೆಸಲು ಇದು ಸಕಾಲವಾಗಿದೆ. ವಲಸಿಗರ ಪ್ರತಿನಿಧಿಯಾಗಿರುವ ಮೆಲನಿಯಾ ಟ್ರಂಪ್‌ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಸರಿ ಅಲ್ಲ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಕಿಡಿ ಹಬ್ಬಿದ್ದು ಪ್ರತಿಭಟನಾಕಾರರು ಕೊಲಂಬಸ್‌ ಸೇರಿದಂತೆ ಹಲವರ ಪ್ರತಿಮೆಗಳನ್ನು ಭಗ್ನಗೊಳಿಸುತ್ತಿದ್ದಾರೆ. ದೇಶದಲ್ಲಿ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರತಿಮೆಗಳನ್ನು ವಿರೂಪಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದಾಗಿ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಮೆಲನಿಯಾ ಮೂಲತಹ ಸ್ಲೊವೇನಿಯಾ ದೇಶದವರು. ಇಲ್ಲಿನ ಸೆವ್ನಿಂಕಾ ಪಟ್ಟಣದಲ್ಲಿ ಮೆಲನಿಯಾ ಅವರ ಮರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಮೆಲನಿಯಾ ಇದೇ ಪಟ್ಟಣದಲ್ಲಿ ಹುಟ್ಟಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.