ADVERTISEMENT

ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್‌ ಉರುಳಿ 49 ಸಾವು, 58 ಮಂದಿಗೆ ಗಾಯ

ಐಎಎನ್ಎಸ್
Published 10 ಡಿಸೆಂಬರ್ 2021, 2:50 IST
Last Updated 10 ಡಿಸೆಂಬರ್ 2021, 2:50 IST
   

ಮೆಕ್ಸಿಕೊ ಸಿಟಿ: ದಕ್ಷಿಣ ಮೆಕ್ಸಿಕೋದಲ್ಲಿ ಟ್ರೈಲರ್ ಟ್ರಕ್ ಪಲ್ಟಿಯಾಗಿ ಕನಿಷ್ಠ 49 ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯ ಅಮೆರಿಕದಿಂದ ಬಂದಿದ್ದ ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರೈಲರ್ ಗುರುವಾರ ದಕ್ಷಿಣ ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್‌ಟ್ಲಾ ಗುಟೈರೆಜ್ ಬಳಿಯ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಘಟನೆಯಲ್ಲಿ ಇನ್ನೂ 58 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ತಿಳಿಸಿದ್ದಾರೆ.

ADVERTISEMENT

ತಿರುವೊಂದರಲ್ಲಿ ಟ್ರಕ್‌ ಯಾಂತ್ರಿಕ ವೈಫಲ್ಯದಿಂದ ತಡಗೋಡೆಗೆ ಅಪ್ಪಳಿಸಿದೆ. ನಂತರ ಟ್ರಕ್‌ನ ಕಂಟೈನರ್‌ ಬೇರ್ಪಟ್ಟು ಉರುಳಿ ಬಿದ್ದಿದೆ ಎಂದು ಗಾರ್ಸಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.