ADVERTISEMENT

ಬಂಧಿತ ಸುಡಾನ್ ಪ್ರಧಾನಿಗೆ ಮನೆಗೆ ತೆರಳಲು ಅನುಮತಿ

ಏಜೆನ್ಸೀಸ್
Published 27 ಅಕ್ಟೋಬರ್ 2021, 5:53 IST
Last Updated 27 ಅಕ್ಟೋಬರ್ 2021, 5:53 IST
ಸುಡಾನ್ ನಾಗರಿಕರು ಸೋಮವಾರ ದೇಶದಲ್ಲಿ ಜಾರಿಯಲ್ಲಿರುವ ಮಿಲಿಟರಿ ದಂಗೆ ವಿರುದ್ಧ ರಾಜಧಾನಿ ಖಾರ್ಟೌಮ್‌ ನಗರದಲ್ಲಿ ಪ್ರತಿಭಟನೆ ನಡೆಸಿದರು(ಸಂಗ್ರಹ ಚಿತ್ರ).
ಸುಡಾನ್ ನಾಗರಿಕರು ಸೋಮವಾರ ದೇಶದಲ್ಲಿ ಜಾರಿಯಲ್ಲಿರುವ ಮಿಲಿಟರಿ ದಂಗೆ ವಿರುದ್ಧ ರಾಜಧಾನಿ ಖಾರ್ಟೌಮ್‌ ನಗರದಲ್ಲಿ ಪ್ರತಿಭಟನೆ ನಡೆಸಿದರು(ಸಂಗ್ರಹ ಚಿತ್ರ).   

ಕೈರೊ: ಸುಡಾನ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿಯ ನಂತರ ಬಂಧನಕ್ಕೊಳಗಾಗಿದ್ದ ಪ್ರಧಾನಿ ಅಬ್ದಲ್ಲಾ ಹ್ಯಾಮ್‌ಡೊಕ್‌ ಮತ್ತು ಅವರ ಪತ್ನಿಗೆ ಖಾರ್ಟೂಮ್‌ನಲ್ಲಿರುವ ತಮ್ಮ ನಿವಾಸಕ್ಕೆ ಮರಳಲು ಅನುಮತಿ ನೀಡಲಾಗಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದಾಯವು ಸೇನಾ ದಂಗೆಯನ್ನು ಖಂಡಿಸಿದ ಮೇಲೆ, ಜನರಲ್ ಅಬ್ದೆಲ್-ಫತ್ತಾಹ್ ಬುರ್ಹಾನ್ ಅವರು ಬಂಧಿತರನ್ನು ಬಿಡುಗಡೆ ಮಾಡಲು ಸಮ್ಮತಿಸಿದರು. ಇದಾದ ನಂತರ, ಪ್ರಧಾನಿ ಮತ್ತು ಅವರ ಪತ್ನಿಗೂ ಮನೆಗೆ ಮರಳಲು ಅನುಮತಿ ನೀಡಲಾಗಿದೆ.

ಹ್ಯಾಮ್‌ಡೋಕ್ ಮತ್ತು ಅವರ ಪತ್ನಿ ಯಾವುದೇ ನಿರ್ಬಂಧಗಳಿಲ್ಲದೇ ಸಂಚರಿಸಲು ಅಥವಾ ಕರೆ ಮಾಡಲು ಅವಕಾಶ ನೀಡಲಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ, ಖಾರ್ಟೂಮ್‌ನಲ್ಲಿರುವ ಅವರ ಮನೆಯ ಸುತ್ತ ‘ಭಾರಿ ಭದ್ರತೆ ನಿಯೋಜಿಸಲಾಗಿದೆ‘ ಎಂದು ಅಧಿಕಾರಿ ತಿಳಿಸಿದರು.

ADVERTISEMENT

ಈ ಮಧ್ಯೆ, ಕ್ರಿಪ್ರಕ್ರಾಂತಿ ವಿರೋಧಿಸಿ ಖಾರ್ಟೂಮ್‌ನ ಬೀದಿಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಸೇನಾಪಡೆಗಳು ಗುಂಡು ಹಾರಿಸಿದಾಗ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.