ಥಾಯ್ಲೆಂಡ್: ಪಾನೀಯದ ಕ್ಯಾನ್ ತೆರೆಯುವ ಪುಲ್–ಟ್ಯಾಬ್ಗಳಿಂದ ತಯಾರಿಸಿದ ಉಡುಪು ಧರಿಸುವ ಮೂಲಕ 2022ರ ಥಾಯ್ಲೆಂಡ್ನ ಭುವನ ಸುಂದರಿ, ನಟಿ ಅನ್ನಾ ಸುಯಾಂಗಾಮ್ ಇಯಾಮ್ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ.
ಈ ಉಡುಪಿನಲ್ಲಿ ಅಮೂಲ್ಯವಾದ ಸ್ವರೊವಸ್ಕಿ ಡೈಮಂಡ್ ಸಹ ಅಳವಡಿಸಲಾಗಿದ್ದು, ಉಡುಪನ್ನು ‘ಹಿಡನ್ ಪ್ರೀಷಿಯಸ್ ಡೈಮಂಡ್ ಡ್ರೆಸ್’ಎಂದೂ ಕರೆಯಲಾಗಿದೆ.
ಈ ಗೌನ್ಗೆ ಮತ್ತೊಂದು ಪ್ರಮುಖವಾದ ಅರ್ಥವಿದೆ. ನಟಿಯ ತಂದೆ ಕಸ ಸಂಗ್ರಹಿಸುವ ಮತ್ತು ತಾಯಿ ಬೀದಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಅವರ ಶ್ರಮವನ್ನು ಈ ಮೂಲಕ ನಟಿ ಪ್ರತಿಬಿಂಬಿಸಿದ್ದಾರೆ. ‘ನನ್ನನ್ನು ‘ಗಾರ್ಬೇಜ್ ಬ್ಯೂಟಿ ಕ್ವೀನ್’ಎಂದು ಹೀಯಾಳಿಸಿದ್ದರು. ಆದರೆ, ಆ ಹೀಯಾಳಿಕೆ ನನ್ನನ್ನು ಅಮೂಲ್ಯ ರತ್ನದಂತೆ ಪ್ರಜ್ವಲಿಸುವುದರಿಂದ ತಡೆಯಲಿಲ್ಲ’ಎಂದು ಅವರು ಹೇಳಿಕೊಂಡಿದ್ದಾರೆ.
ಫ್ಯಾಶನ್ ಬ್ರಾಂಡ್ ಮುನಿರತ್ ಈ ‘ಹಿಡನ್ ಪ್ರೀಷಿಯಸ್ ಡೈಮಂಡ್ ಗೌನ್’ಅನ್ನು ವಿನ್ಯಾಸಗೊಳಿಸಿದೆ.
‘ನೀವು ಹುಟ್ಟಿದ ಸ್ಥಳ ಕೊಳಕಾಗಿದ್ದರೂ ನೀವು ಅಲ್ಲೇ ಕೊಳೆಯಬೇಕಿಲ್ಲ. ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸಿಕೊಳ್ಳುವ ಶಕ್ತಿ ಹೊಂದಿದ್ದೀರಿ ಎಂಬುದನ್ನು ಮನಗಾಣಿರಿ’ಎಂದು ನಟಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.