
ಪ್ರಜಾವಾಣಿ ವಾರ್ತೆ
ಕೇಪ್ ಕಾರ್ನಿವಲ್ (ಅಮೆರಿಕ): ಅನಾರೋಗ್ಯಪೀಡಿತ ಗಗನಯಾತ್ರಿ ಸೇರಿದಂತೆ ಮೂವರು ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್‌ಎಸ್) ನಾಸಾ ಗುರುವಾರ ವಾಪಸ್ ಕರೆಸಿಕೊಂಡಿದೆ.
ವೈದ್ಯಕೀಯ ಕಾರಣದಿಂದಾಗಿ ಗಗನಯಾತ್ರಿಗಳನ್ನು ವಾಪಸ್ ಕರೆಸಿದ ನಾಸಾದ ಮೊದಲ ತೆರವು ಕ್ರಮ ಇದಾಗಿದೆ. ಜನವರಿ 7ರಂದು ಅನಾರೋಗ್ಯದ ಬಗ್ಗೆ ನಾಸಾಗೆ ಮಾಹಿತಿ ಸಿಕ್ಕಿತ್ತು. ಆದರೆ, ಅನಾರೋಗ್ಯದಿಂದ ಬಳಲುತ್ತಿರುವ ಗಗನಯಾತ್ರಿ ಕುರಿತ ವಿವರಗಳನ್ನು ಅದು ಬಹಿರಂಗ ಪಡಿಸಿಲ್ಲ.
ಗಗನಯಾತ್ರಿಗಳಿದ್ದ ಸ್ಪೇಸ್‌ಎಕ್ಸ್‌ನ ಗಗನನೌಕೆ, 11 ಗಂಟೆಗಳ ಪ್ರಯಾಣದ ಬಳಿಕ ಸ್ಯಾನ್ ಡಿಗೋ ಬಳಿ ಪೆಸಿಫಿಕ್ ಸಾಗರದಲ್ಲಿ ಬಂದಿಳಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.