ADVERTISEMENT

ಚಂದ್ರನಲ್ಲಿ ನೀರಿನ ಕಣ ಪತ್ತೆ: ನಾಸಾ

ಪಿಟಿಐ
Published 10 ಮಾರ್ಚ್ 2019, 19:44 IST
Last Updated 10 ಮಾರ್ಚ್ 2019, 19:44 IST
   

ವಾಷಿಂಗ್ಟನ್: ಚಂದ್ರನ ಒಂದು ಭಾಗದಲ್ಲಿ ನೀರಿನ ಕಣಗಳ ಚಲನೆ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ಎಂದು ನಾಸಾ ಹೇಳಿದೆ.

‘ಭವಿಷ್ಯದ ಚಂದ್ರಯಾನಗಳಲ್ಲಿ ಗಗನಯಾನಿಗಳಿಗೆ ನೀರು ದೊರಕುವ ಸಾಧ್ಯತೆ ಪರಿಶೀಲಿಸಲು ಈ ಸಂಶೋಧನೆ ನೆರವಾಗುವ ನಿರೀಕ್ಷೆ ಇದೆ’ ಎಂದು ವಿಜ್ಞಾನಿಅಮಾಂಡ ಹೆಂಡ್ರಿಕ್ಸ್ ತಿಳಿಸಿದ್ದಾರೆ.

ಚಂದ್ರಗ್ರಹದಲ್ಲಿ ತೇವಾಂಶವೇ ಇಲ್ಲ ಎಂದೇ ಕಳೆದ ದಶಕದವರೆಗೂ ವಿಜ್ಞಾನಿಗಳು ಭಾವಿಸಿದ್ದರು. ಆದರೆ ಇಲ್ಲಿನ ಮಣ್ಣಿನಲ್ಲಿ ವಿರಳವಾಗಿ ನೀರಿನ ಕಣಗಳು ಇವೆ ಎನ್ನುವುದನ್ನು ಪತ್ತೆ ಮಾಡಲಾಗಿತ್ತು ಎಂದು ನಾಸಾ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.