ಕೇಪ್ ಕೆನವೆರಾಲ್, ಅಮೆರಿಕ: ಪರೀಕ್ಷೆ ಉದ್ದೇಶದೊಂದಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಉಡ್ಡಯನ ಮಾಡಿದ್ದ ಒರಾಯನ್ ಗಗನನೌಕೆ ವ್ಯೋಮಯಾನವನ್ನು ಪೂರ್ಣಗೊಳಿಸಿ ಭೂಮಿಯತ್ತ ಭಾನುವಾರ ಮುಖಮಾಡಿತು.
25 ದಿನಗಳ ತನ್ನ ವ್ಯೋಮಯಾನದ ವೇಳೆ, ಚಂದ್ರನ ಸುತ್ತ ತಿರುಗಿದ ಈ ಗಗನನೌಕೆ, ಮೆಕ್ಸಿಕೊದ ಬಾಜಾ ದ್ವೀಪಕಲ್ಪ ಬಳಿ ಸಮುದ್ರದಲ್ಲಿ ಇಳಿಯಿತು. ಗಗನನೌಕೆಯನ್ನು ಹೊತ್ತು ತರುವ ಸಲುವಾಗಿ, ಅದು ಬಂದಿಳಿಯುವ ಸ್ಥಳದಿಂದ ಕೆಲವು ಮೈಲಿಗಳ ದೂರದಲ್ಲಿ ನೌಕಾಪಡೆಯ ಹಡಗನ್ನು ನಿಯೋಜಿಸಲಾಗಿತ್ತು.
ಈ ಗಗನನೌಕೆಯನ್ನು ನವೆಂಬರ್ 16ರಂದು ಉಡ್ಡಯನ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.