ADVERTISEMENT

ಷರೀಫ್‌ ಗಡಿಪಾರಿಗಾಗಿ ಬ್ರಿಟನ್‌ ಸರ್ಕಾರಕ್ಕೆ ಪಾಕಿಸ್ತಾನ ಮನವಿ

ಪಿಟಿಐ
Published 2 ಮಾರ್ಚ್ 2020, 19:21 IST
Last Updated 2 ಮಾರ್ಚ್ 2020, 19:21 IST
   

ಲಾಹೋರ್‌: ತಲೆಮರೆಸಿಕೊಂಡಿರುವಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಗಡಿಪಾರು ಮಾಡುವಂತೆ ಪಾಕಿಸ್ತಾನವು ಬ್ರಿಟನ್‌ಸರ್ಕಾರಕ್ಕೆ ಮನವಿ ಮಾಡಿದೆ.

‘ಷರೀಫ್‌ ಅವರು ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದಾರೆ. ಹಾಗಾಗಿ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಕೋರಿ ಈ ವಾರದಲ್ಲಿ ಬ್ರಿಟನ್‌ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಪ್ರಧಾನಿಗಳ ವಿಶೇಷ ಸಹಾಯಕ(ಮಾಹಿತಿ) ಫಿರ್‌ದೋಸ್‌ ಆಶಿಕ್‌ ಅವಾನ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನವಾಜ್‌ ಷರೀಫ್‌ ಕಳೆದ ನ.19ರಂದು ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಆದರೆ ಅಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಚಿಕಿತ್ಸೆ ಹೆಸರಿನಲ್ಲಿ ಮುಂಚಿತವಾಗಿ ಯೋಜನೆ ರೂಪಿಸಿ ಷರೀಫ್‌ ಪರಾರಿಯಾಗಿದ್ದಾರೆ ಎಂದುಅವರು ಆರೋಪಿಸಿದರು.

ADVERTISEMENT

ಚಿಕಿತ್ಸೆಗಾಗಿ ನಾಲ್ಕು ವಾರಗಳ ಅವಧಿಗೆ ವಿದೇಶಕ್ಕೆ ತೆರಳಲು ಲಾಹೋರ್‌ ಹೈಕೋರ್ಟ್ ನವಾಜ್‌ ಷರೀಫ್‌ ಅವರಿಗೆ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.