ADVERTISEMENT

ನವಾಜ್‌ ಷರೀಫ್‌ ಆರೋಗ್ಯ ಸ್ಥಿತಿ ಗಂಭೀರ

ಪಿಟಿಐ
Published 29 ಅಕ್ಟೋಬರ್ 2019, 19:49 IST
Last Updated 29 ಅಕ್ಟೋಬರ್ 2019, 19:49 IST
ನವಾಜ್‌ ಷರೀಪ್‌
ನವಾಜ್‌ ಷರೀಪ್‌   

ಲಾಹೋರ್‌ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ (69) ಅವರ ಆರೋಗ್ಯ ತೀವ್ರ ಹದಗೆಟ್ಟಿದೆ.

ಷರೀಪ್‌ ಅವರ ರಕ್ತದಲ್ಲಿನ ಬಿಳಿರಕ್ತಕಣಗಳ ಸಂಖ್ಯೆಯು (ಪ್ಲೇಟ್‌ಲೆಟ್‌) ನಿರಂತವಾಗಿ ಕುಸಿಯುತ್ತಿದೆ. ಷರೀಫ್‌ ಅವರು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತಿಲ್ಲ. ಮಧುಮೇಹ, ಹೃದಯ, ಮೂತ್ರಪಿಂಡದ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ ಎಂದು ಷರೀಫ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸರಣಿ ಟ್ವೀಟ್‌ ಮಾಡಿದ್ದಾರೆ.

ನವಾಜ್ಷರೀಫ್ಅವರ ಪ್ಲೇಟ್‌ಲೇಟ್‌ಗಳ ಸಂಖ್ಯೆಯು ಒಂದೇ ದಿನದಲ್ಲಿ 45 ಸಾವಿರದಿಂದ25ಸಾವಿರಕ್ಕೆ ಕುಸಿದಿದೆ.ಪ್ಲೇಟ್‌ಲೆಟ್‌ಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿದಿದ್ದರಿಂದ ಸೋಮವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ನವಾಜ್‌ ಷರೀಫ್‌ ಅವರಿಗೆ ಶನಿವಾರ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಹೃದಯಕ್ಕೆ ರಕ್ತ ಪೂರೈಕೆ ಕಡಿಮೆ ಆಗಿದ್ದರಿಂದ ಎದೆನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದರು.

ಆಸ್ಪತ್ರೆಗೆ ದಾಖಲಾದ ದಿನದಿಂದ ಅವರು ತೂಕ ಕಳೆದುಕೊಳ್ಳುತ್ತಿದ್ದಾರೆ. 107 ಕೆ.ಜಿ ಇದ್ದ ಅವರೀಗ 100 ಕೆ.ಜಿ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.