ADVERTISEMENT

ಪರಮಾಣು ಪರೀಕ್ಷೆ ವಿರೋಧಿಸಿದ್ದ ನವಾಜ್ ಷರೀಫ್: ಶೇಕ್ ರಶೀದ್

ಪಿಟಿಐ
Published 30 ಮೇ 2020, 21:54 IST
Last Updated 30 ಮೇ 2020, 21:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಹೋರ್: ‘ಭಾರತದ ಪರೀಕ್ಷೆಗಳಿಗೆ ಪ್ರತಿಯಾಗಿ 1998ರಲ್ಲಿ ಪಾಕಿಸ್ತಾನದಲ್ಲಿಪರಮಾಣು ಪರೀಕ್ಷೆಗಳನ್ನು ನಡೆಸಲು ಅಂದಿನ ಪ್ರಧಾನಿ ನವಾಜ್ ಷರೀಫ್ ವಿರೋಧಿಸಿದ್ದರು’ ಎಂದು ಪಾಕಿಸ್ತಾನ ರೈಲ್ವೆ ಸಚಿವ ಶೇಕ್ ರಶೀದ್ ಶನಿವಾರ ಹೇಳಿದ್ದಾರೆ.

‘ಷರೀಫ್ ಮತ್ತು ಅವರ ಇಡೀ ಸಚಿವ ಸಂಪುಟ ಭಾರತಕ್ಕೆ ಪ್ರತಿಕ್ರಿಯೆಯಾಗಿ ಪರಮಾಣು ಪರೀಕ್ಷೆಗಳನ್ನು ನಡೆಸಲು ವಿರೋಧಿಸಿತ್ತು. ಆ ಸಮಯದಲ್ಲಿ ರಾಜಾ ಜಾಫರುಲ್ ಹಕ್, ಗೌಹರ್ ಅಯೂಬ್ ಮತ್ತು ನಾನು ಮಾತ್ರ ಪರೀಕ್ಷೆ ಪರವಿದ್ದೆವು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಷರೀಫ್ ವಿರೋಧಿಸಿದ್ದರು ಅಂದ ಮೇಲೆ ಯಾರ ಮೇರೆಗೆ ಪರೀಕ್ಷೆ ನಡೆಸಲಾಯಿತು’ ಎನ್ನುವ ಸುದ್ದಿಗಾರರ ಪ್ರಶ್ನೆಗೆ ರಶೀದ್, ‘ಪರೋಕ್ಷವಾಗಿ ಸೇನೆಯನ್ನು ಉಲ್ಲೇಖಿಸಿ, ಇವು ರಾಷ್ಟ್ರೀಯ ರಹಸ್ಯಗಳು, ಇವು ಹಾಗೇ ಇರಲಿ’ ಎಂದು ಉತ್ತರಿಸಿದರು.

ADVERTISEMENT

ರಶೀದ್, 1998ರಲ್ಲಿ ನವಾಜ್ ಷರೀಫ್ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.

ರಶೀದ್ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ನ ಹಿರಿಯ ನಾಯಕ ರಾಣಾ ಸನಾವುಲ್ಲಾ, ‘ಅಂತರರಾಷ್ಟ್ರೀಯ ಒತ್ತಡದ ನಡುವೆಯೂ 1998ರಲ್ಲಿ ನವಾಜ್ ಷರೀಫ್ ಪರಮಾಣು ಪರೀಕ್ಷೆಗಳನ್ನು ನಡೆಸಿದರು ಎಂಬುದು ಇಡೀ ಜಗತ್ತಿಗೇ ತಿಳಿದಿದೆ’ ಎಂದಿದ್ದಾರೆ.

ನವಾಜ್‌ ಶರೀಫ್‌ ವಿರುದ್ಧ ಬಂಧನದ ವಾರಂಟ್‌
ಇಸ್ಲಾಮಾಬಾದ್‌ (ಪಿಟಿಐ):
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವಮಾಜಿ ಪ್ರಧಾನಿ ನವಾಜ್‌ ಷರೀಫ್‌ವಿಚಾರಣೆಗೆ ಹಾಜರಾಗದ ಕಾರಣ ಇಸ್ಲಾಮಾಬಾದ್‌ ಕೋರ್ಟ್‌ ಬಂಧನದ ವಾರಂಟ್‌ ಹೊರಡಿಸಿದೆ.

ಷರೀಫ್‌ ಅನಾರೋಗ್ಯದ ಕಾರಣ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.