ಕಠ್ಮಂಡು: ಭಾರತದ ಜಲಶಕ್ತಿ ಸಚಿವಾಲಯದ ಮೂವರು ಸದಸ್ಯರ ನಿಯೋಗ ನೇಪಾಳದ ಮಧೇಶ್ ಪ್ರಾಂತ್ಯದ ಮುಖ್ಯಮಂತ್ರಿ ಸತೀಶ್ ಕುಮಾರ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿತು. ಮುಂಗಾರು ವಿಳಂಬದಿಂದ ನೇಪಾಳದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಭೆ ನಡೆಸಿತು.
ಭಾರತದ ನಿಯೋಗವು ಪ್ರಾಂತ್ಯದ ನೀರಿನ ಕೊರತೆಯನ್ನು ನೀಗಿಸಲು ಅಂತರ್ಜಲ ಬಳಕೆಯ ಬಗ್ಗೆ ಅತ್ಯಮೂಲ್ಯ ಮಾಹಿತಿಯನ್ನು ಒದಗಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಾಂತ್ಯದ ವಿವಿಧ ಭಾಗಗಳ ಅಂತರ್ಜಲ ಲಭ್ಯತೆಯನ್ನು ನಿರ್ಣಯಿಸಲು ಭಾರತೀಯ ತಂತ್ರಜ್ಞರ ತಂಡ ಶೀಘ್ರದಲ್ಲೆ ವಿವರವಾದ ಅಧ್ಯಯನ ನಡೆಸಲಿದೆ ಎಂದು ನಿಯೋಗವು ಮುಖ್ಯಮಂತ್ರಿಗೆ ಭರವಸೆ ನೀಡಿತು.
ಭಾರತದ ಗಡಿ ಬಳಿಯ ಪ್ರಮುಖ ಕೃಷಿ ಪ್ರದೇಶವಾದ ಮಧೇಶ್ ಪ್ರಾಂತ್ಯದಲ್ಲಿ, ಈ ವರ್ಷದ ಮುಂಗಾರು ವೇಳೆ ತಡವಾಗಿ ಮತ್ತು ಅಸಮರ್ಪಕವಾಗಿ ಮಳೆ ಸುರಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ರೈತರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.