ADVERTISEMENT

ನೇಪಾಳ ಚುನಾವಣೆ: ಪ್ರಧಾನಿ ಶೇರ್ ದೇವುಬಾಗೆ ಗೆಲುವು

ಪಿಟಿಐ
Published 23 ನವೆಂಬರ್ 2022, 2:25 IST
Last Updated 23 ನವೆಂಬರ್ 2022, 2:25 IST
ನೇಪಾಳ ಪ್ರಧಾನಿ ಶೇರ್‌ ಬಹಾದ್ದೂರ್‌ ದೇವುಬಾ
ನೇಪಾಳ ಪ್ರಧಾನಿ ಶೇರ್‌ ಬಹಾದ್ದೂರ್‌ ದೇವುಬಾ   

ಕಠ್ಮಂಡು: ನೇಪಾಳ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇರ್‌ ಬಹಾದ್ದೂರ್‌ ದೇವುಬಾ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಶ್ಚಿಮ ನೇಪಾಳದ ಡಡೆಲಧುರಾ ಕ್ಷೇತ್ರದಿಂದ 7ನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

77 ವರ್ಷದ ದೇವುಬಾ ಅವರು 25,534 ಮತಗಳನ್ನು ಪಡೆದರು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ದೇವುಬಾ ಅವರ ಸಮೀಪದ ಪ್ರತಿಸ್ಪರ್ಧಿ, 31 ವರ್ಷದ ಸಾಗರ್‌ ಧಾಕಲ್‌ ಅವರು ಕೇವಲ 1,302 ಮತಗಳನ್ನಷ್ಟೇ ಗಳಿಸಲು ಶಕ್ತರಾದರು.
5 ದಶಕಗಳ ರಾಜಕೀಯ ಜೀವನದಲ್ಲಿ ದೇವುಬಾ ಅವರು ಲೋಕಸಭೆ ಚುನಾವಣೆಯಲ್ಲಿ ಒಂದು ಬಾರಿಯೂ ಸೋತಿಲ್ಲ. ಆಡಳಿತ ಪಕ್ಷ ನೇಪಾಳಿ ಕಾಂಗ್ರೆಸ್‌ನ ಅಧ್ಯಕ್ಷ ದೇವುಬಾ ಅವರು ನಾಲ್ಕು ಬಾರಿ ಪ್ರಧಾನಿಯಾಗಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್‌ 10 ಸ್ಥಾನಗಳನ್ನು ಗೆದ್ದಿದ್ದು, 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೆ.ಪಿ. ಒಲಿ ನೇತೃತ್ವದ ಸಿಪಿಎನ್‌-ಯುಎಂಎಲ್‌ ಪಕ್ಷವು 3 ಸ್ಥಾನಗಳನ್ನು ಗೆದ್ದಿದ್ದು, 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ADVERTISEMENT

ಭಾನುವಾರ ಮತದಾನ ನಡೆದಿದೆ. ಮತ ಎಣಿಕೆ ಸೋಮವಾರದಿಂದ ಆರಂಭಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.