ADVERTISEMENT

ಸಣ್ಣ ಫ್ಲಾಟ್‌ಗೆ ಮರಳಲಿರುವ ಬ್ರಿಟನ್‌ ನೂತನ ಪ್ರಧಾನಿ ಸುನಕ್‌

ಪಿಟಿಐ
Published 27 ಅಕ್ಟೋಬರ್ 2022, 19:30 IST
Last Updated 27 ಅಕ್ಟೋಬರ್ 2022, 19:30 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಕುಟುಂಬವು 10 ಡೌನಿಂಗ್‌ ಸ್ಟ್ರೀಟ್‌ ನಿವಾಸಕ್ಕೆ ಬದಲು ಈ ಮೊದಲಿನ ತಮ್ಮ ಸಣ್ಣ ಫ್ಲಾಟ್‌ಗೆ ಮರಳಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಚಾನ್ಸಲರ್‌ ಆಗಿದ್ದ ಸಂದರ್ಭದಲ್ಲಿ ಸುನಕ್‌, ಅವರ ಪತ್ನಿ ಅಕ್ಷತಾ ಮೂರ್ತಿಮತ್ತು ಅವರ ಇಬ್ಬರು ಮಕ್ಕಳು ಇದೇ ನಿವಾಸದಲ್ಲಿ ವಾಸಿಸುತ್ತಿದ್ದರು. ಈ ನಿವಾಸ ಅವರಿಗೆ ಇಷ್ಟವಾಗಿದ್ದು ಅವರ ಕುಟುಂಬ ಇಲ್ಲಿ ಬಹಳ ಸಂತಸದಿಂದಿತ್ತು ಎಂದು ಡೌನಿಂಗ್‌ ಸ್ಟ್ರೀಟ್‌ ವಕ್ತಾರೆ ತಿಳಿಸಿದ್ದಾರೆ.

ನಂ. 10 ಡೌನಿಂಗ್ ಸ್ಟ್ರೀಟ್‌ 1735ರಿಂದ ಬ್ರಿಟನ್‌ ಪ್ರಧಾನಿಗಳ ನಿವಾಸವಾಗಿತ್ತು. ಪ್ರಧಾನಿಗಳ ಅಧಿಕೃತ ನಿವಾಸವಾಗಿ, ಕಚೇರಿಯಾಗಿ ಮತ್ತು ವಿಶ್ವದಾದ್ಯಂತ ಆಗಮಿಸುವ ನಾಯಕ ಆತಿಥ್ಯಕ್ಕಾಗಿ ಇದು ಬಳಕೆಯಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.