ADVERTISEMENT

ಲಂಡನ್‌ನಲ್ಲಿ ಮಂಕಿಪಾಕ್ಸ್‌ನ ಹೊಸ ತಳಿ ಪತ್ತೆ

ಪಿಟಿಐ
Published 2 ಸೆಪ್ಟೆಂಬರ್ 2022, 15:25 IST
Last Updated 2 ಸೆಪ್ಟೆಂಬರ್ 2022, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌:ಪಶ್ಚಿಮ ಆಫ್ರಿಕಾಕ್ಕೆ ಇತ್ತೀಚಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ನ ಹೊಸ ತಳಿಯನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ವರದಿಯಾಗಿರುವ ಮಂಕಿಪಾಕ್ಸ್‌ ಸೋಂಕಿನ ಹೊಸ ಪ್ರಕರಣಗಳನ್ನು ಪ್ರಾಥಮಿಕ ಜಿನೋಮ್‌ ಸಿಕ್ವೆನ್ಸಿಂಗ್ ಪರೀಕ್ಷೆ ನಡೆಸಿದಾಗ, ಇದರಲ್ಲಿ ಹೊಸ ರೂಪಾಂತರ ತಳಿ ಕಂಡು ಬಂದಿಲ್ಲ ಎಂದು ಬ್ರಿಟನ್‌ನ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್‌ಎಸ್‌ಎ) ತಿಳಿಸಿದೆ.

ಅಪಾಯಕಾರಿ ರೋಗಕಾರಕಗಳ (ಎಸಿಡಿಪಿ) ಸಲಹಾ ಸಮಿತಿ ಮೇರೆಗೆ ವ್ಯಕ್ತಿಯನ್ನು ರಾಯಲ್ ಲಿವರ್‌ಪೂಲ್ ಯೂನಿವರ್ಸಿಟಿ ಆಸ್ಪತ್ರೆಗೆ ಹೆಚ್ಚಿನ ಪರಿಣಾಮದ ಸಾಂಕ್ರಾಮಿಕ ರೋಗ (ಎಚ್‌ಸಿಐಡಿ) ಘಟಕಕ್ಕೆ ದಾಖಲಿಸಲಾಗಿದೆ.

ಸೋಂಕು ದೃಢೀಕರಿಸುವಮೊದಲು ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಯುಕೆಎಚ್‌ಎಸ್‌ಎಡಾ. ಸೋಫಿಯಾ ಮಾಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.