ADVERTISEMENT

ನ್ಯೂಜಿಲೆಂಡ್‌: ‘ವ್ಯಾಕ್ಸಾಥಾನ್‘ ಅಭಿಯಾನಕ್ಕೆ ಉತ್ತಮ ಸ್ಪಂದನೆ’

ಏಜೆನ್ಸೀಸ್
Published 16 ಅಕ್ಟೋಬರ್ 2021, 10:27 IST
Last Updated 16 ಅಕ್ಟೋಬರ್ 2021, 10:27 IST
ನ್ಯೂಜಿಲೆಂಡ್‌ನಲ್ಲಿ ಶನಿವಾರ ಆಯೋಜಿಸಿದ್ದ ಕೋವಿಡ್ ಲಸಿಕೆ ನೀಡಿಕೆ ಅಭಿಯಾನ ‘ವ್ಯಾಕ್ಸಾಥಾನ್‘ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಆಕ್ಲೆಂಡ್‌ ನಗರದಲ್ಲಿ ನಾಗರಿಕರೊಬ್ಬರಿಂದ ಮಾಹಿತಿ ಪಡೆಯುತ್ತಿರುವ ದೃಶ್ಯ –ರಾಯಿಟರ್ಸ್‌ ಚಿತ್ರ
ನ್ಯೂಜಿಲೆಂಡ್‌ನಲ್ಲಿ ಶನಿವಾರ ಆಯೋಜಿಸಿದ್ದ ಕೋವಿಡ್ ಲಸಿಕೆ ನೀಡಿಕೆ ಅಭಿಯಾನ ‘ವ್ಯಾಕ್ಸಾಥಾನ್‘ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಆಕ್ಲೆಂಡ್‌ ನಗರದಲ್ಲಿ ನಾಗರಿಕರೊಬ್ಬರಿಂದ ಮಾಹಿತಿ ಪಡೆಯುತ್ತಿರುವ ದೃಶ್ಯ –ರಾಯಿಟರ್ಸ್‌ ಚಿತ್ರ   

ವೆಲ್ಲಿಂಗ್ಟನ್‌: ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವ್ಯಾಕ್ಸಾಥಾನ್‌’ ಹೆಸರಿನ ‘ಲಸಿಕಾ ಉತ್ಸವ‘ದಲ್ಲಿ ನ್ಯೂಜಿಲೆಂಡ್‌ನ ಆರೋಗ್ಯ ಕಾರ್ಯಕರ್ತರು ಶನಿವಾರ ದಾಖಲೆ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆಗಳನ್ನು ನೀಡಿದರು.

ಸತತ ಎಂಟು ಗಂಟೆಗಳ ಕಾಲ ದೂರದರ್ಶನ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಪ್ರಸಾರವಾದ ಈ ‘ವ್ಯಾಕ್ಸಾಥಾನ್‌’ನಲ್ಲಿ ಖ್ಯಾತ ಸಂಗೀತಗಾರರು, ಕ್ರೀಡಾ ತಾರೆಯರು ಮತ್ತು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮ ಆರಂಭವಾದ ನಂತರ ಮಧ್ಯಾಹ್ನದ ವೇಳೆಗೆ 1.20 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಪ್ರತಿ ನಿತ್ಯ ಸರಾಸರಿ 93 ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದರು. ಈ ಉತ್ಸವದ ಮೂಲಕ ನಿತ್ಯ ಲಸಿಕೆ ಪಡೆಯುವ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಲಸಿಕಾ ಉತ್ಸವ ಸಂಜೆಯವರೆಗೂ ಮುಂದುವರಿಯಿತು.

ADVERTISEMENT

ಪ್ರಧಾನ ಮಂತ್ರಿ ಜೆಸಿಂಡ ಅರ್ಡೆಮ್ ಅವರು ‘ಲಸಿಕಾ ಅಭಿಯಾನ‘ ಕುರಿತು ವೆಲ್ಲಿಂಗ್ಟನ್‌ನ ಲಸಿಕಾ ಕೇಂದ್ರಗಳಲ್ಲಿನ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು. ಈ ಕಾರ್ಯಕ್ರಮದ ಆರಂಭದಲ್ಲಿ 1 ಲಕ್ಷ ಡೋಸ್‌ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ನಂತರ ಅದನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.