ADVERTISEMENT

ಮುಂದಿನ ಹತ್ತು ವರ್ಷ ಭಾರತಕ್ಕೆ ಸುವರ್ಣ ಕಾಲ: ಹೂಡಿಕೆದಾರ ರಂಗಸ್ವಾಮಿ

ಪಿಟಿಐ
Published 19 ಜುಲೈ 2020, 7:04 IST
Last Updated 19 ಜುಲೈ 2020, 7:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ‘ತಂತ್ರಜ್ಞಾನ, ಔಷಧ, ಇ– ಕಾಮರ್ಸ್‌, ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಭಾರತಕ್ಕೆ ಮುಂದಿನ ಹತ್ತು ವರ್ಷಗಳು ಸುವರ್ಣ ಕಾಲ ಎನಿಸಲಿವೆ’ ಎಂದು ಸಿಲಿಕಾನ್‌ ವ್ಯಾಲಿಯ ಬಂಡವಾಳ ಹೂಡಿಕೆದಾರ, ಸಾಫ್ಟ್‌ವೇರ್‌ ವ್ಯಾಪಾರ ಪರಿಣತ ಎಂ.ಆರ್‌.‌ ರಂಗಸ್ವಾಮಿ ಹೇಳಿದ್ದಾರೆ.

‘ಕೊರೊನಾ ಪಿಡುಗು ಜಗತ್ತನ್ನು, ವಿಶೇಷವಾಗಿ ಅಮೆರಿಕ ಮತ್ತು ಭಾರತವನ್ನು ತೀವ್ರವಾಗಿ ಕಾಡುತ್ತಿದೆ. ಹೀಗಿದ್ದರೂ ಭಾರತದಲ್ಲಿ ಆಗುತ್ತಿರುವ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ ಅಚ್ಚರಿ ಉಂಟುಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತಕ್ಕೆ ಸುಮಾರು 20 ಶತಕೋಟಿ ಡಾಲರ್‌ ವಿದೇಶಿ ಬಂಡವಾಳ ಹರಿದುಬಂದಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ ಹಲವು ಕಂಪನಿಗಳು ಭಾರತದತ್ತ ಮುಖಮಾಡಲಿವೆ.

ಇದರ ವ್ಯತಿರಿಕ್ತ ಪರಿಣಾಮ ಜಗತ್ತಿನ ಇತರ ರಾಷ್ಟ್ರಗಳ ಮೇಲಾಗಿದೆ. ಮುಂದಿನ ವರ್ಷಗಳಲ್ಲಿ ಔಷಧದಿಂದ ಕಿರಾಣಿವರೆಗೆ ಎಲ್ಲವೂ ಡಿಜಿಟಲ್‌ ಆಗಲಿದೆ. ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಿಕೊಂಡು, ಮುಂದಿನ ಹತ್ತು ವರ್ಷಗಳ ಕಾಲ ಪ್ರಕಾಶಮಾನವಾಗಿ ಹೊಳೆಯುವ ಅವಕಾಶ ಭಾರತಕ್ಕೆ ಇದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಭಾರತಕ್ಕೆ ಕಂಪನಿಗಳು ಸುಲಭವಾಗಿ ಬರಲು ಅನುಕೂಲವಾಗುವಂಥ ನಿಯಮಾವಳಿಗಳನ್ನು ರೂಪಿಸುವ ಕಡೆಗೆ ರಾಜಕಾರಣಿಗಳು, ಅಧಿಕಾರಿಗಳು ಗಮನ ಹರಿಸಬೇಕು. ಖಾಸಗಿತನ, ಭದ್ರತೆ ಮುಂತಾದವುಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಭವಿಷ್ಯದಲ್ಲಿ ನಾವು ಬಗೆಹರಿಸಿಕೊಳ್ಳಬೇಕು. ಸುಗಮ ವಹಿವಾಟಿಗೆ ಇರುವ ಎಲ್ಲಾ ಅಡೆತಡೆಗಳನ್ನು ಕೂಡಲೇ ನಿವಾರಿಸಿಕೊಳ್ಳಬೇಕು. ಸರ್ಕಾರ ಈಗಲೇ ಕಾರ್ಯಪ್ರವೃತ್ತ ಆಗಬೇಕು’ ಎಂದು ರಂಗಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.