ADVERTISEMENT

ಆರೋಗ್ಯಕರ ಜೀವಕೋಶಗಳಿಗೆ ಹಾನಿಪಡಿಸದೇ ಕ್ಯಾನ್ಸರ್‌ಗೆ ಚಿಕಿತ್ಸೆ!

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 14:58 IST
Last Updated 7 ಜುಲೈ 2022, 14:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹ್ಯೂಸ್ಟನ್‌ (ಪಿಟಿಐ): ಕ್ಯಾನ್ಸರ್‌ ಚಿಕಿತ್ಸಾ ವಿಧಾನದಲ್ಲಿಅಮೆರಿಕದ ಸಂಶೋಧಕರು ಮಹತ್ವದ ಸುಧಾರಣೆಯ ತಂತ್ರ ಅಭಿವೃದ್ಧಿಪಡಿಸಿದ್ದು, ಆರೋಗ್ಯಕರ ಅಂಗಾಂಶಗಳಿಗೆ ಯಾವುದೇ ಹಾನಿಯಾಗದಂತೆ ಕ್ಯಾನ್ಸರ್‌ ಗೆಡ್ಡೆಯ ಕೋಶಗಳನ್ನು ಮಾತ್ರ ನಾಶಪಡಿಸುವಂತಹ ಅತ್ಯಾಧುನಿಕ ಚಿಕಿತ್ಸಾ ವಿಧಾನ ಕಂಡುಹಿಡಿದಿದ್ದಾರೆ.

ಸಂಶೋಧಕರು ಅಭಿವೃದ್ಧಿಪಡಿಸಿರುವ ಆಂಕೋಲೈಟಿಕ್‌ವಿರೋಥೆರಪಿ (ಒವಿ)ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಸುಧಾರಿತ ಚಿಕಿತ್ಸಾ ವಿಧಾನವೆನಿಸಿದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಇಮ್ಯುನೊಥೆರಪಿಯಲ್ಲೇ ಇದೊಂದು ಮುಂಚೂಣಿ ಚಿಕಿತ್ಸಾ ವಿಧಾನವಾಗಿ ಹೊರಹೊಮ್ಮಿದೆ. ಆಂಕೋಲೈಟಿಕ್‌ ವೈರಸ್‌ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುತ್ತದೆ, ಕ್ಯಾನ್ಸರ್‌ ಕೋಶದ ಹತ್ತಿರದಲ್ಲೇ ಇರುವ ಆರೋಗ್ಯಕರ ಅಂಗಾಂಶಗಳಿಗೆ ಯಾವುದೇ ಹಾನಿಮಾಡದೇ ಹಾಗಯೇ ಉಳಿಸುತ್ತದೆ.

ಕರುಳು ಮತ್ತು ಶ್ವಾಸಕೋಶದಲ್ಲಿನ ಕ್ಯಾನ್ಸರ್‌ ಗೆಡ್ಡೆಗಳನ್ನು ಕರಗಿಸುವಲ್ಲಿಯೂ ಒವಿ ಚಿಕಿತ್ಸಾ ವಿಧಾನ ಪರಿಣಾಮಕಾರಿ ಎನ್ನುವುದು ನಮ್ಮ ಇತ್ತೀಚಿನ ಅಧ್ಯಯನದಲ್ಲಿ ಕಂಡುಬಂದಿದೆ. ಈ ಹೊಸ ತಂತ್ರದ ಅಭಿವೃದ್ಧಿಯ ಬೆಂಬಲಾರ್ಥವಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು 18 ಲಕ್ಷ ಡಾಲರ್‌ (₹14.22 ಕೋಟಿ) ಅನುದಾನ ನೀಡಿದೆ ಎಂದುಅಮೆರಿಕದ ಹ್ಯೂಸ್ಟನ್‌ ವಿಶ್ವವಿದ್ಯಾಲಯದ ನ್ಯೂಕ್ಲಿಯರ್‌ ರಿಸೆಪ್ಟರ್ಸ್‌ ಆ್ಯಂಡ್‌ ಸೆಲ್ ಸಿಗ್ನಲಿಂಗ್ ಕೇಂದ್ರದ ನಿರ್ದೇಶಕಶಾನ್‌ ಝಂಗ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.