ADVERTISEMENT

ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಹೆಸರು

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ಲಂಡನ್‌ (ಪಿಟಿಐ): 'ಇಂಗ್ಲೆಂಡ್‌–ಭಾರತ ಸಂಬಂಧ: 100 ಮಂದಿ ಪ್ರಭಾವಿ ಮಹಿಳೆ'ಯರ ಪಟ್ಟಿಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೆಸರಿದೆ.

ಲಂಡನ್‌ನ ಸಂಸತ್ತಿನಲ್ಲಿ ನಡೆದ ‘ಇಂಡಿಯಾ ಡೇ’ ಆಚರಣೆ ಸಂದರ್ಭ ಈ ಪಟ್ಟಿಯನ್ನು ಇಂಗ್ಲೆಂಡ್‌ನ ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಸೋಮವಾರ ಪ್ರಕಟಿಸಿದ್ದಾರೆ.

ಕಾರ್ಪೊರೇಟ್‌ ವ್ಯವಹಾರಗಳ ಸಚಿವೆಯೂ ಆಗಿರುವ ನಿರ್ಮಲಾ ಸೀತಾರಾಮನ್‌ ಅವರು, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುವ ಭಾರತದ ಪ್ರಭಾವಿ ಮಹಿಳೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡಿರುವ ನಿರ್ಮಲಾ ಅವರು ಲಂಡನ್‌ನಲ್ಲಿ ವೃತ್ತಿಯನ್ನೂ ನಿರ್ವಹಿಸಿದ್ದರು ಎಂದು ಇಂಗ್ಲೆಂಡ್‌ ಮೂಲದ ಮಾಧ್ಯಮ ಸಂಸ್ಥೆ ಇಂಡಿಯಾ ಇಂಕ್‌. ಪ್ರಕಟಿಸಿರುವ ಪಟ್ಟಿಯಲ್ಲಿ ವಿವರಣೆ ಇದೆ. ಇದೇ ಪಟ್ಟಿಯಲ್ಲಿ ಬ್ರಿಟನ್‌ನ ಹಿರಿಯ ಸಂಪುಟ ಸಚಿವೆ ಪೆನ್ನಿ ಮೋರ್ಡಾಂಟ್‌ ಅವರ ಹೆಸರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.