ADVERTISEMENT

ಚೀನಾ ಜತೆ ಮಾತುಕತೆಗೆ ಸಚಿವೆ ನಿರ್ಮಲಾ ಉತ್ಸಾಹ

ಪಿಟಿಐ
Published 11 ನವೆಂಬರ್ 2018, 17:54 IST
Last Updated 11 ನವೆಂಬರ್ 2018, 17:54 IST

ಇಟಾನಗರ: ಭಾರತ ಮತ್ತು ಚೀನಾ ನಡುವಣ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಬೇಕು. ಈ ವಿಚಾರಗಳು ವಿವಾದಗಳಾಗಿ ಬೆಳೆಯಲು ಅವಕಾಶ ಕೊಡಬಾರದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಭಾರತ ಮತ್ತು ಚೀನಾಗಳೆರಡೂ ಪರಸ್ಪರರನ್ನು ಗೌರವಿಸಬೇಕು ಮತ್ತು ಪ್ರದೇಶದ ಶಾಂತಿ, ಸಮೃದ್ಧಿಗೆ ಕೈಜೋಡಿಸಬೇಕು. ರಕ್ಷಣೆ, ಗಡಿ ವಿವಾದಗಳು, ಗಡಿ ವ್ಯಾಪಾರ, ಹಿಂದೂ ಮಹಾಸಾಗರದಲ್ಲಿ ಭಾರತ ಮತ್ತು ಚೀನಾದ ನೌಕಾಪಡೆಗಳ ಇರವು ಮುಂತಾದ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದೆ. ಈ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ರುತುಮ್‌ ಕಮ್‌ಗೊ ಸ್ಮಾರಕ ಉಪನ್ಯಾಸದಲ್ಲಿ ನಿರ್ಮಲಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಬುಮ್‌ ಲಾ ಮಾರ್ಗದ ಮೂಲಕ ಚೀನಾದ ಜತೆಗೆ ವಹಿವಾಟಿಗೆ ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿ ಪೆಮಾ ಖಂಡು ಕೋರಿದರು. ಗಡಿ ವ್ಯಾಪಾರಕ್ಕೆ ಸಾಧ್ಯತೆ ಇದೆ ಎಂದು ನಿರ್ಮಲಾ ಅವರು ಹೇಳಿದರು. ಸಿಕ್ಕಿಂನ ನಾಥು ಲಾ ಮತ್ತು ಮಣಿಪುರದ ಮೊರೆಹ್‌ ಮೂಲಕ ಗಡಿ ವಹಿವಾಟು ನಡೆಯುತ್ತಿದೆ ಎಂದು ಹೇಳಿದರು.

**

ಸ್ಪರ್ಧೆ ಸಹಜ, ಆದರೆ ಅದು ಸಂಘರ್ಷವಾಗಿ ಬದಲಾಗಬಾರದು. ಭಿನ್ನಾಭಿಪ್ರಾಯ<br/>ಗಳು ಬಿಕ್ಕಟ್ಟುಗಳಾಗಿ ರೂಪುಗೊಳ್ಳಲು ಅವಕಾಶ ಕೊಡಬಾರದು
–ನಿರ್ಮಲಾ ಸೀತಾರಾಮನ್‌, ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.