ADVERTISEMENT

‘ಸಾಕ್ಷ್ಯ ಒದಗಿಸುವಲ್ಲಿ ಭಾರತ ವಿಫಲ’

‘ಎಫ್‌–16’ ಯುದ್ಧ ವಿಮಾನ ಹೊಡೆದುರುಳಿಸಿರುವ ಪ್ರಕರಣ

ಪಿಟಿಐ
Published 9 ಏಪ್ರಿಲ್ 2019, 18:34 IST
Last Updated 9 ಏಪ್ರಿಲ್ 2019, 18:34 IST
   

ಇಸ್ಲಾಮಾಬಾದ್‌: ಪಾಕಿಸ್ತಾನ ವಾಯಪಡೆಯ ‘ಎಫ್‌–16’ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವ ಬಗ್ಗೆ ಸಾಕ್ಷ್ಯ ಒದಗಿಸುವಲ್ಲಿ ಭಾರತ ವಿಫಲವಾಗಿದೆ ಎಂದು ಪಾಕಿಸ್ತಾನದ ಮಿಲಿಟರಿ ಹೇಳಿದೆ.

ಫೆಬ್ರುವರಿ 27 ರಂದು ನಡೆದ ಘರ್ಷಣೆ ಸಂದರ್ಭದಲ್ಲಿ ಪಾಕಿಸ್ತಾನ ವಾಯುಪಡೆಯ ‘ಎಫ್‌–16’ ಯುದ್ಧ ವಿಮಾನವನ್ನು ‘ಮಿಗ್‌–21’ ಬೈಸನ್‌ ಯುದ್ಧ ವಿಮಾನದಿಂದ ಹೊಡೆದುರುಳಿಸಲಾಗಿದೆ. ಈ ಬಗ್ಗೆ ರೆಡಾರ್‌ ಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದ್ದು, ನಿರಾಕರಿಸಲಾಗದ ಪುರಾವೆಗಳನ್ನು ಒದಗಿಸಲಾಗಿದೆ ಎಂದು ಭಾರತ ಹೇಳಿದ್ದಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ ಮಿಲಿಟರಿ, ಈ ಬಗ್ಗೆ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಭಾರತ ವಿಫಲವಾಗಿದೆ ಎಂದಿದೆ.

ಪಾಕಿಸ್ತಾನ ಮಿಲಿಟರಿ ವಕ್ತಾರ ಮೇಜರ್‌ ಜನರಲ್‌ ಆಸೀಫ್‌ ಅವರು, ‘ಮೇಲಿಂದ ಮೇಲೆ ಅದೇ ಹೇಳಿಕೆಗಳನ್ನು ನೀಡುವುದರಿಂದ ಸುಳ್ಳನ್ನು ಸತ್ಯವೆಂದು ಬಿಂಬಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.