ADVERTISEMENT

ಟರ್ಕಿ ಹೆಸರು ಇನ್ನು ಮುಂದೆ ‘ಟರ್ಕಿಯೆ‘

ಏಜೆನ್ಸೀಸ್
Published 2 ಜೂನ್ 2022, 13:35 IST
Last Updated 2 ಜೂನ್ 2022, 13:35 IST
ಮೆವ್ಲುಟ್ ಕಾವುಸೊಗ್ಲು
ಮೆವ್ಲುಟ್ ಕಾವುಸೊಗ್ಲು   

ಅಂಕಾರ: ಟರ್ಕಿ ತನ್ನ ಹೆಸರನ್ನು ‘ಟರ್ಕಿಯೆ’ ಎಂದು ಬದಲಾಯಿಸಿಕೊಂಡಿದೆ. ಇನ್ನು ಮುಂದೆ ದೇಶವನ್ನು ‘ಟರ್ಕಿಯೆ’ ಎಂಬುದಾಗಿ ಕರೆಯುವಂತೆ ಕೋರಿ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.

‘ಟರ್ಕಿಯೆ ವಿದೇಶಾಂಗ ಸಚಿವರ ಪತ್ರ ಕೈ ಸೇರಿದೆ. ಈ ಕ್ಷಣದಿಂದಲೇ ಆ ರಾಷ್ಟ್ರದ ಹೆಸರಿನಲ್ಲಿನ ಬದಲಾವಣೆಯನ್ನು ಅನುಷ್ಠಾನಗೊಳಿಸಲಾಗಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್ ದುಜಾರಿಕ್‌ ಹೇಳಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶದ ಛಾಪನ್ನು ಮರುಸ್ಥಾಪಿಸುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಟರ್ಕಿ ಎಂಬುದು ಒಂದು ವಿಧದ ಕೋಳಿಯ ಹೆಸರು. ಈ ಪಕ್ಷಿಯ ಹೆಸರಿನೊಂದಿಗೆ ಕೆಲ ನಕಾರಾತ್ಮಕ ಅರ್ಥಗಳು ತಳಕುಹಾಕಿಕೊಂಡಿವೆ. ಈ ನಕಾರಾತ್ಮಕ ಅಂಶಗಳಿಂದ ದೇಶದ ಹೆಸರನ್ನು ಬೇರ್ಪಡಿಸಬೇಕು ಎಂಬ ಉದ್ದೇಶವೂ ಈ ನಡೆಯ ಹಿಂದಿದೆ ಎನ್ನಲಾಗುತ್ತಿದೆ.

ADVERTISEMENT

ಜಾಗತಿಕ ವೇದಿಕೆಗಳಲ್ಲಿ ದೇಶದ ಹೆಸರನ್ನು ಟರ್ಕಿಯೆ ಎಂದೇ ಬಳಸಬೇಕು ಎಂಬ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷ ರಿಸಿಪ್ ತಯ್ಯಿಪ್ ಎರ್ಡೋಗನ್ ಅವರ ಕಚೇರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.