ADVERTISEMENT

ಹಿಜಾಬ್ ವಿಚಾರಕ್ಕೆ ಕಾಲೇಜು ಪ್ರವೇಶ ನಿರ್ಬಂಧ; ಭಯಾನಕ: ಮಲಾಲ ಯೂಸುಫ್‌ ಝೈ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 4:22 IST
Last Updated 10 ಫೆಬ್ರುವರಿ 2022, 4:22 IST
ಮಲಾಲ
ಮಲಾಲ   

ಲಂಡನ್‌:ಕರ್ನಾಟಕದಲ್ಲಿನ ಹಿಜಾಬ್ ಸಂಘರ್ಷದ ಬಗ್ಗೆ ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿನ ಹೋರಾಟಗಾರ್ತಿ ಮಲಾಲ ಯೂಸುಫ್‌ ಝೈ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು,ಹೆಣ್ಣುಮಕ್ಕಳನ್ನು ಹಿಜಾಬ್ ಧರಿಸಿ ಶಾಲೆಗೆ ಹೋಗಲು ನಿರಾಕರಿಸುವುದು ಭಯಾನಕ ಸಂಗತಿಯಾಗಿದೆ ಎಂದಿದ್ದಾರೆ.

ಕಾಲೇಜು ನಮ್ಮನ್ನು ವಿದ್ಯಾಭ್ಯಾಸ ಮತ್ತು ಹಿಜಾಬ್ ನಡುವೆ ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದೆ ಎಂಬ ವಿದ್ಯಾರ್ಥಿನಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ‘ಮಹಿಳೆಯರಿಗೆ ನಿರ್ಬಂಧಗಳು ಮುಂದುವರಿಯುತ್ತಿವೆ. ಹೆಚ್ಚು ಅಥವಾ ಕಡಿಮೆ ಬಟ್ಟೆ ಧರಿಸುವ ವಿಚಾರವಾಗಿ ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಾಯಕರು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT