ADVERTISEMENT

ಅಮೆರಿಕಕ್ಕೆ ಪರಮಾಣು ದಾಳಿಯ ಎಚ್ಚರಿಕೆ ಸಂದೇಶ ಎಂದ ಉತ್ತರ ಕೊರಿಯಾ

ಏಜೆನ್ಸೀಸ್
Published 19 ಫೆಬ್ರುವರಿ 2023, 12:51 IST
Last Updated 19 ಫೆಬ್ರುವರಿ 2023, 12:51 IST
.
.   

ಸೋಲ್ (ಎಪಿ): ಶನಿವಾರ ನಡೆಸಲಾದ ಖಂಡಾಂತರ ಕ್ಷಿಪಣಿ ಪ್ರಯೋಗವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿರುವ ಉತ್ತರ ಕೊರಿಯಾ, ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮೇಲೆ ಪರಮಾಣು ದಾಳಿ ನಡೆಸುವ ಅಭ್ಯಾಸದ ಭಾಗವಾಗಿಯೇ ಈ ಪರೀಕ್ಷೆ ನಡೆಸಿದ್ದಾಗಿ ಹೇಳಿಕೊಂಡಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು ಜಂಟಿ ಸೇನಾ ತಾಲೀಮು ನಡೆಸಲು ತಯಾರಿ ನಡೆಸುತ್ತಿದ್ದಂತೆಯೇ ಉತ್ತರ ಕೊರಿಯಾ ಹಠಾತ್‌ ರೀತಿಯಲ್ಲಿ ಶನಿವಾರ ತನ್ನ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು.

ಅಧ್ಯಕ್ಷ ಕಿಮ್‌ ಜಾಂಗ್ ಉನ್‌ ಅವರ ನೇರ ಆದೇಶದ ಮೇರೆಗೆ, ಯಾವುದೇ ಪೂರ್ವತಯಾರಿ ಇಲ್ಲದೆ ಈ ಖಂಡಾಂತರ ಕ್ಷಿಪಣಿಯ (ಹ್ವಾಸಂಗ್‌–15 ಐಸಿಬಿಎಂ) ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.