ADVERTISEMENT

ನಾರ್ವೆ: ಮಾಸ್ಕ್‌, ಅಂತರ ಕಾಯ್ದುಕೊಳ್ಳುವ ನಿಯಮ ಹಿಂದಕ್ಕೆ

ಏಜೆನ್ಸೀಸ್
Published 12 ಫೆಬ್ರುವರಿ 2022, 11:14 IST
Last Updated 12 ಫೆಬ್ರುವರಿ 2022, 11:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಓಸ್ಲೊ (ಎಎಫ್‌ಪಿ): ಓಮೈಕ್ರಾನ್‌ ಸೋಂಕಿನ ಉಲ್ಬಣದ ಹೊರತಾಗಿಯೂ ನಾರ್ವೆಯಲ್ಲಿ ಶನಿವಾರದಿಂದ ಮಾಸ್ಕ್‌ ಧರಿಸುವುದು, ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಇತರ ಕೋವಿಡ್‌ ನಿರ್ಬಂಧಗಳನ್ನು ರದ್ದುಗೊಳಸಲಾಗಿದೆ.

‘ನಾವು ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ತೆಗೆದುಹಾಕಿದ್ದೇವೆ. ಈ ಹಿಂದಿನಂತೆ ನೈಟ್‌ಲೈಫ್‌, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಸಂದರ್ಭಗಳಲ್ಲಿ ನಾವು ಬೆರೆಯಬಹುದಾಗಿದೆ’ ಎಂದು ಪ್ರಧಾನಿಜೋನಾಸ್ ಗಹರ್‌ ಸ್ಟೋರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುಂಪು ಸೇರಲು ನಿಗದಿಪಡಿಸಲಾಗಿದ್ದ ಮಿತಿ,ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಲ್ಕೋಹಾಲ್‌ ಮಾರಾಟದ ಮೇಲಿನ ನಿರ್ಬಂಧವನ್ನು ಈ ತಿಂಗಳ ಆರಂಭದಲ್ಲಿಯೇ ನಾರ್ವೆಯಲ್ಲಿ ತೆಗೆದುಹಾಕಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.