ADVERTISEMENT

ಎನ್‌ಆರ್‌ಐ ಕೈಗಾರಿಕೋದ್ಯಮಿ ಸ್ವರಾಜ್‌ ಪೌಲ್‌ ನಿಧನ

ಪಿಟಿಐ
Published 22 ಆಗಸ್ಟ್ 2025, 15:42 IST
Last Updated 22 ಆಗಸ್ಟ್ 2025, 15:42 IST
ಸ್ವರಾಜ್‌ ಪೌಲ್
ಸ್ವರಾಜ್‌ ಪೌಲ್   

ಲಂಡನ್‌: ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೈಗಾರಿಕೋದ್ಯಮಿ ಲಾರ್ಡ್‌ ಸ್ವರಾಜ್‌ ಪೌಲ್ (94) ಅವರು ಲಂಡನ್‌ನಲ್ಲಿ ಗುರುವಾರ ನಿಧನರಾದರು.

ಪೌಲ್‌ ಅವರು ಬ್ರಿಟನ್‌ ಮೂಲದ ಕ್ಯಾಪರೊ ಸಮೂಹ ಕೈಗಾರಿಕೆಯ ಸಂಸ್ಥಾಪಕರು. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಪಂಜಾಬ್‌ನ ಜಲಂಧರ್‌ನಲ್ಲಿ ಹುಟ್ಟಿದ ಅವರು ನಂತರ ಬ್ರಿಟನ್‌ನಲ್ಲಿ ನೆಲಸಿದ್ದರು. ನಾಲ್ಕು ವರ್ಷದ ಅವರ ಪುತ್ರಿ ಅಂಬಿಕಾ ಅವರು ಕ್ಯಾನ್ಸರ್‌ನಿಂದ ಮೃತಪಟ್ಟ ನಂತರ ‘ಅಂಬಿಕಾ ಪೌಲ್‌ ಪ್ರತಿಷ್ಠಾನ’ ಆರಂಭಿಸಿ ಜಗತ್ತಿನಾದ್ಯಂತ ಸಾವಿರಾರು ಜನರಿಗೆ ಆರೋಗ್ಯ ಮತ್ತು ಶೈಕ್ಷಣಿಕ ನೆರವು ನೀಡಿದ್ದರು.

ADVERTISEMENT

ಈ ವರ್ಷ ಪ್ರಕಟಗೊಂಡ ‘ಸಂಡೆ ಟೈಮ್ಸ್‌ ರಿಚ್‌ ಲಿಸ್ಟ್‌’ನಲ್ಲಿ ಪೌಲ್‌ ಅವರು 2 ಬಿಲಿಯನ್‌ ಜಿಬಿಪಿ ಆದಾಯದೊಂದಿಗೆ 81ನೇ ರ‍್ಯಾಂಕ್‌ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.