ADVERTISEMENT

ನಿಲ್ಲದ ಕ್ಷಿಪಣಿ ಪರೀಕ್ಷೆ: ದಕ್ಷಿಣ ಕೊರಿಯಾ ಖಂಡನೆ

ಏಜೆನ್ಸೀಸ್
Published 17 ಆಗಸ್ಟ್ 2019, 20:15 IST
Last Updated 17 ಆಗಸ್ಟ್ 2019, 20:15 IST
   

ಸೋಲ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹೊಸ ಕ್ಷಿಪಣಿ ಪರೀಕ್ಷೆ ನಡೆಸಿದ್ದಾರೆ ಎಂದು ದಕ್ಷಿಣ ಕೊರಿಯಾ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಅಣ್ವಸ್ತ್ರ ನಿಶ್ಶಸ್ತ್ರೀಕರಣ ಕುರಿತು ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸಲು ಅಮೆರಿಕ ಆಸಕ್ತಿ ತೋರಿತ್ತು . ಈ ಪ್ರಕ್ರಿಯೆಯ ಮೊದಲು ಅಮೆರಿಕದ ರಾಯಭಾರಿ ಮುಂದಿನ ವಾರ ಸೋಲ್‌ಗೆ ಭೇಟಿ ನೀಡಲಿದ್ದರು. ಈ ವೇಳೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ಮಾಧ್ಯಮಗಳು ಖಂಡಿಸಿವೆ.

ಎರಡು ಸಮೀಪಗಾಮಿ ಖಂಡಾಂತರ ಕ್ಷಿ‍ಪಣಿಗಳನ್ನು ಶುಕ್ರವಾರ ಪ್ರಯೋಗಿಸಲಾಗಿದೆ. ಅವು ಪ್ರಯೋಗ ನಡೆಸಿದ ಸ್ಥಳದಿಂದ ಸುಮಾರು 230 ಕಿ.ಮೀ ಕ್ರಮಿಸಿದ್ದು, ಕೊರಿಯಾ ಪ್ರಸ್ಥಭೂಮಿ ಮತ್ತು ಜಪಾನ್‌ ದೇಶಗಳ ನಡುವೆ ಇರುವ ಸಮುದ್ರದಲ್ಲಿ ಪತನ ಕಂಡಿವೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಅಧಿಕಾರಿಗಳು ದೃಢಪಡಿಸಿದ್ದಾರೆ.

ADVERTISEMENT

ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ ಈ ನಡೆಯನ್ನು ಖಂಡಿಸಿವೆ. ಕಳೆದ ಒಂದು ವಾರದಿಂದ ಉತ್ತರ ಕೊರಿಯಾ ನಿರಂತರ ಕ್ಷಿಪಣಿ ಪ್ರಯೋಗ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.