ADVERTISEMENT

ಅಫ್ಗಾನಿಸ್ತಾನ: ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟ; ಮೂರು ಮಂದಿ ಸಾವು

ಏಜೆನ್ಸೀಸ್
Published 10 ಜನವರಿ 2021, 8:12 IST
Last Updated 10 ಜನವರಿ 2021, 8:12 IST
ಅಫ್ಗಾನಿಸ್ತಾನದಲ್ಲಿ ಬಾಂಬ್‌ ಸ್ಫೋಟಗೊಂಡ ಸ್ಥಳವನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು
ಅಫ್ಗಾನಿಸ್ತಾನದಲ್ಲಿ ಬಾಂಬ್‌ ಸ್ಫೋಟಗೊಂಡ ಸ್ಥಳವನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು   

ಕಾಬೂಲ್‌: ಅಫ್ಘಾನಿಸ್ತಾನದ ಕಾಬೂಲ್‌ನ ರಸ್ತೆಬದಿಯಲ್ಲಿ ಭಾನುವಾರ ಬಾಂಬ್ ಸ್ಫೋಟಗೊಂಡಿದ್ದು, ಇದರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.

ಅಫ್ಗಾನಿಸ್ತಾನ ಸರ್ಕಾರವು ಕತಾರ್‌ನಲ್ಲಿ ತಾಲಿಬಾನ್‌ ಜೊತೆಗಿನ ಶಾಂತಿಮಾತುಕತೆಯನ್ನು ಮುಂದುವರಿಸಿದೆ. ಈ ಸಂದರ್ಭದಲ್ಲೇ ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟಗೊಂಡಿದೆ.

‘ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ಮೂರು ಮಂದಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯನ್ ಅವರು ತಿಳಿಸಿದರು.

ADVERTISEMENT

ಈವರೆಗೂ ಯಾವುದೇ ಸಂಘಟನೆಯೂ ಈ ದಾಳಿಯ ಹೊಣೆಯನ್ನು ಹೊತ್ತಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.