ADVERTISEMENT

ಅಮೆರಿಕ: 10 ಸಾವಿರ ವಿಮಾನಗಳ ಹಾರಾಟ ರದ್ದು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 17:46 IST
Last Updated 25 ಜನವರಿ 2026, 17:46 IST
ಟೆನ್ನೇಸ್ಸಿಯ ನ್ಯಾಶ್‌ವಿಲ್ಲೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಮದ ನಡುವೆ ವಿಮಾನ ಹಾರಾಟ ನಡೆಸಿತು –ಎಎಫ್‌ಪಿ ಚಿತ್ರ
ಟೆನ್ನೇಸ್ಸಿಯ ನ್ಯಾಶ್‌ವಿಲ್ಲೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಮದ ನಡುವೆ ವಿಮಾನ ಹಾರಾಟ ನಡೆಸಿತು –ಎಎಫ್‌ಪಿ ಚಿತ್ರ   

ಲಾಸ್‌ ವೆಗಾಸ್‌: ಅಮೆರಿಕದಲ್ಲಿ ಹಿಮದೊಂದಿಗೆ ಬಿರುಗಾಳಿ ಬೀಸುತ್ತಿರುವುದರಿಂದ ದೇಶದಾದ್ಯಂತ 14,100ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಶನಿವಾರವು ರದ್ದುಗೊಳಿಸಲಾಗಿತ್ತು. ಈ ಪೈಕಿ 10 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟವು ಭಾನುವಾರ ನಿಗದಿಯಾಗಿತ್ತು.

‘ದಕ್ಷಿಣ ರಾಕಿ ಪರ್ವತಗಳಿಂದ ನ್ಯೂ ಇಂಗ್ಲೆಂಡ್‌ವರೆಗಿನ ಹಾದಿಯಲ್ಲಿ ವ್ಯಾಪಕವಾದ ಹಿಮ, ಹಿಮಪಾತ ಮತ್ತು ಘನೀಕೃತ ಮಳೆ ಬೀಳುತ್ತಿದ್ದು, ಸುಮಾರು 1.80 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ’ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಶನಿವಾರ ರಾತ್ರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT