ADVERTISEMENT

ಟ್ರಂಪ್‌ ವರ್ಚುವಲ್ ರ‍್ಯಾಲಿ:1 ಲಕ್ಷಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರ ವೀಕ್ಷಣೆ

ಪಿಟಿಐ
Published 20 ಜುಲೈ 2020, 9:32 IST
Last Updated 20 ಜುಲೈ 2020, 9:32 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌:‌ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ಸೂಚಿಸಿ ನಡೆದ ವರ್ಚುವಲ್ ರ‍್ಯಾಲಿಯನ್ನು ದಾಖಲೆ ಸಂಖ್ಯೆಯಲ್ಲಿ ಅಂದರೆ 1 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್ನರು ವೀಕ್ಷಿಸಿದರು.

ಭಾರತೀಯ ಮೂಲದ ಅಮೆರಿಕನ್ನರು ಅಮೆರಿಕದ ಪ್ರಭಾವಶಾಲಿ ಸಮುದಾಯಗಳಲ್ಲಿ ಒಂದಾಗಿದ್ದು, ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿ ವರ್ಚುವಲ್ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ ಎಂದು ಟ್ರಂಪ್ ಬೆಂಬಲಿಗರೊಬ್ಬರು ಪ್ರತಿಪಾದಿಸಿದರು.

ನವೆಂಬರ್‌ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್‌ ವಿಕ್ಟರಿ ಇಂಡಿಯನ್‌ ಅಮೆರಿಕನ್‌ ಹಣಕಾಸು ಸಮಿತಿಯ ಸಹ ಅಧ್ಯಕ್ಷ ಅಲ್ ಮಸನ್‌ ಅವರು ಭಾರತೀಯ ಮೂಲದ ಅಮೆರಿಕನ್ನರ ಬೆಂಬಲವನ್ನು ಟ್ರಂಪ್ ಪರವಾಗಿ ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ADVERTISEMENT

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಎದುರಾಳಿಯಾಗಿ ಡೆಮಾಕ್ರಟಿಕ್‌ ಪಕ್ಷದಿಂದ ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್‌ ಸ್ಪರ್ಧಿಸುತ್ತಿದ್ದಾರೆ.

ಅಮೆರಿಕನ್ಸ್4ಹಿಂದೂಸ್‍ ಈ ಕುರಿತ ಹೇಳಿಕೆಯಲ್ಲಿ, ಸುಮಾರು 30 ಸಾವಿರ ಜನರು ರ‍್ಯಾಲಿಯನ್ನು ವೀಕ್ಷಿಸಿದ್ದಾರೆ. ಮುಂದಿನ ಕೆಲವು ಗಂಟೆಗಳಲ್ಲಿ ಸುಮಾರು 70 ಸಾವಿರ ಜನರು ಆನ್‍ಲೈನ್ ಮೂಲಕ ವೀಕ್ಷಿಸುವ ವಿಶ್ವಾಸವಿದೆ ಎಂದು ಮಸನ್‍ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.