ADVERTISEMENT

ಮಲೇಷ್ಯಾದಲ್ಲಿ ಪ್ರವಾಹ: 26 ಸಾವಿರ ಮಂದಿ ಸ್ಥಳಾಂತರ, ಒಬ್ಬ ಸಾವು

ಏಜೆನ್ಸೀಸ್
Published 2 ಮಾರ್ಚ್ 2023, 11:23 IST
Last Updated 2 ಮಾರ್ಚ್ 2023, 11:23 IST
.
.   

ಕ್ವಾಲಾಲಂಪುರ: ಮಲೇಷ್ಯಾದಲ್ಲಿ ಸಂಭವಿಸಿರುವ ಪ್ರವಾಹದಲ್ಲಿ ಅನೇಕ ಕುಟುಂಬಗಳು ಸಿಕ್ಕಿಬಿದ್ದಿದ್ದು, ಗುರುವಾರದ ವೇಳೆಗೆ 26 ಸಾವಿರಕ್ಕೂ ಹೆಚ್ಚು ಮಂದಿಯನ್ನು ಪ್ರವಾಹ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ. ಪ್ರವಾಹಕ್ಕೆ ಸಿಲುಕಿದ ಕಾರೊಂದರಲ್ಲಿದ್ದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

‘ಮಲೇಷ್ಯಾ ದಕ್ಷಿಣ ಭಾಗದ ಜೋಹರ್‌ ರಾಜ್ಯ, ಸಿಂಗಪುರದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಸುಮಾರು 25 ಸಾವಿರ ನಿರಾಶ್ರಿತರನ್ನು ಶಾಲೆಗಳು ಹಾಗೂ ಸಮುದಾಯ ಭವನಗಳಿಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದಿಂದ ಈ ನಿರಾಶ್ರಿತರ ಸಂಖ್ಯೆ ದ್ವಿಗುಣವಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ದೇಶದ ಇನ್ನೂ ಇತರೆ ಐದು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನವೆಂಬರ್‌ನಲ್ಲಿ ಆರಂಭವಾದ ಮಾನ್ಸೂನ್‌ನಿಂದ ದೇಶದಲ್ಲಿ ವಿಪರೀತ ಮಳೆಯಾಗುತ್ತಿದೆ. ಈ ಮಳೆಯು ಏಪ್ರಿಲ್‌ ತಿಂಗಳವರೆಗೂ ಸುರಿಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಮಳೆಯಿಂದಾಗಿ ಹಾನಿಗೊಳಗಾಗಿರುವ ರಸ್ತೆಗಳು, ಕೆಸರಿನಿಂದ ಮನೆಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲಾಗಿದೆ.

ADVERTISEMENT

ರಕ್ಷಣಾ ಪಡೆಗಳು ಜೋಹರ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸುವ ವೇಳೆ, ಪ್ರವಾಹಕ್ಕೆ ಸಿಲುಕಿದ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ಕಳೆದ ಡಿಸೆಂಬರ್‌ ತಿಂಗಳಿನಲ್ಲೂ ಪ್ರವಾಹದಿಂದಾಗಿ ಸುಮಾರು 10 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.