ADVERTISEMENT

ವಿಶ್ವಸಂಸ್ಥೆ: ಕೋವಿಡ್‌, ಸಂಘರ್ಷದಿಂದಾಗಿ 8 ಕೋಟಿ ಜನ ಬಲವಂತದ ಸ್ಥಳಾಂತರ

ವಿಶ್ವ ಸಂಸ್ಥೆಯ ನಿರಾಶ್ರಿತ ಸಂಸ್ಥೆ ಯುಎನ್‌ಎಚ್‌ಸಿಆರ್‌ ಅಂದಾಜು

ಪಿಟಿಐ
Published 10 ಡಿಸೆಂಬರ್ 2020, 5:59 IST
Last Updated 10 ಡಿಸೆಂಬರ್ 2020, 5:59 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ‘ಕೋವಿಡ್ 19‘ ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಮತ್ತು ಅಸ್ತಿತ್ವದಲ್ಲಿರುವ ಹಾಗೂ ಸೃಷ್ಟಿಯಾಗುತ್ತಿರುವ ಹೊಸ ಸಂಘರ್ಷಗಳಿಂದಾಗಿ 2020ರ ಮಧ್ಯಭಾಗದ ವೇಳೆಗೆ ವಿಶ್ವದಾದ್ಯಂತ 8 ಕೋಟಿ ಜನರು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಜಾಗತಿಕವಾಗಿ ಬಲವಂತದಿಂದ ಜನರು ಸ್ಥಳಾಂತರಗೊಳ್ಳುತ್ತಿರುವ ಪ್ರವೃತ್ತಿಯ ಕುರಿತು ಸಿದ್ಧಪಡಿಸಿರುವ ವರದಿಯಲ್ಲಿ, ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಯುಎನ್‌ಎಚ್‌ಸಿಆರ್‌ ಅಂದಾಜಿಸಿರುವ ಪ್ರಕಾರ, ಈ ವರ್ಷದ ಮಧ್ಯಭಾಗದ ವೇಳೆಗೆ 8 ಕೋಟಿ ಜನರು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ. ಈ ವರದಿ ಜಿನೇವಾದಲ್ಲಿ ಬುಧವಾರ ಬಿಡುಗಡೆಯಾಗಿದೆ.

ಈ ವರ್ಷದ ಆರಂಭದಲ್ಲಿ ವೇಶ್ಯಾವಾಟಿಕೆ, ಸಂಘರ್ಷ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂತಹ ಪ್ರಕರಣಗಳಿದಾಗಿ 7.95 ಕೋಟಿ ಮಂದಿ ಮನೆಯಿಂದ ಹೊರ ಹಾಕಲ್ಪಟ್ಟಿದ್ದರು. ಇದರಲ್ಲಿ 4.57 ಕೋಟಿ ಜನ ದೇಶದೊಳಗೆ ಸ್ಥಳಾಂತರಗೊಂಡಿದ್ದರೆ, 2.96 ಕೋಟಿ ಮಂದಿ ದೇಶದಿಂದ ಹೊರಕ್ಕೆ ಬಲವಂತವಾಗಿ ಹೊರದೂಡಲ್ಪಟ್ಟಿದ್ದರು. 42 ಲಕ್ಷ ಮಂದಿಗೆ ಆಶ್ರಯ ಅರಸಿ ಹೋಗಿದ್ದರು.

ADVERTISEMENT

2019ರ ಅಂತ್ಯದವರೆಗಿನ ಮಾಹಿತಿ ಪ್ರಕಾರ ಬಲವಂತವಾಗಿ ಸ್ಥಳಾಂತರಗೊಂಡ 7.95 ಕೋಟಿ ಜನರಲ್ಲಿ 3 ರಿಂದ 4 ಕೋಟಿಯಷ್ಟು (ಶೇ 38 ರಿಂದ 43) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ.

‘ಅಸ್ತಿತ್ವದಲ್ಲಿರುವ ಮತ್ತು ಹೊಸ ಘರ್ಷಣೆಗಳು ಜತೆಗೆ, ಕೋವಿಡ್‌ 19 ಸಾಂಕ್ರಾಮಿಕದ ಕಾರಣದಿಂದಾಗಿ 2020 ರಲ್ಲಿ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ‘ ಎಂದು ವಿಶ್ವಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.