ಲಾಹೋರ್: ‘ಬೈಸಾಖಿ ಉತ್ಸವ’ದಲ್ಲಿ ಭಾಗಿಯಾಗುವ ಭಾರತೀಯ ಸಿಖ್ ಧಾರ್ಮಿಕ ಯಾತ್ರಿಗಳಿಗಾಗಿ ಪಾಕಿಸ್ತಾನ ಸರ್ಕಾರ ಇದೇ ಮೊದಲಿಗೆ 6,700ಕ್ಕೂ ಅಧಿಕ ವೀಸಾ ನೀಡಿದೆ.
ಉಭಯ ದೇಶಗಳ ಮಧ್ಯೆ 1974ರಲ್ಲಿ ಆಗಿದ್ದ ಒಪ್ಪಂದದ ಸಂಖ್ಯೆಗಿಂತ ಹೆಚ್ಚಿನ ವೀಸಾಗಳನ್ನು 50 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರತಿ ವರ್ಷ ಸಿಖ್ಖರ ಹೊಸ ವರ್ಷದ ಸಂದರ್ಭದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಏ.14ರಂದು ನಡೆಯುವ ಕಾರ್ಯಕ್ರಮಕ್ಕಾಗಿ ಭಾರತದ ಸಿಖ್ ಯಾತ್ರಿಗಳು ಏ. 10ರಂದು ವಾಘಾ ಗಡಿ ಮೂಲಕ ಬರಲಿದ್ದಾರೆ. ನಂಕಾನಾ ಸಾಹಿಬ್‌ನ ಗುರುದ್ವಾರದಲ್ಲಿ ಏ. 14ರಂದು ಬೈಸಾಖಿ ಉತ್ಸವದ ಮುಖ್ಯ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.