ADVERTISEMENT

ರಾತ್ರೋರಾತ್ರಿ ಕೋಟ್ಯಧಿ‍ಪತಿಯಾದ ಪಾಕ್ ಪೊಲೀಸ್‌: ಬ್ಯಾಂಕ್ ಅಧಿಕಾರಿಗಳಿಂದ ತನಿಖೆ

ಪಿಟಿಐ
Published 6 ನವೆಂಬರ್ 2022, 19:31 IST
Last Updated 6 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ: ಪಾಕಿಸ್ತಾನದ ಪೊಲೀಸ್‌ ಅಧಿಕಾರಿಗಳು ಈಗ ರಾತ್ರೋರಾತ್ರಿ ಕೋಟ್ಯಧಿಪತಿಗಳಾಗುತ್ತಿದ್ದು, ಮುಂದಿನ ಸರದಿ ಯಾರದಿರಬಹುದು ಎಂದು ಕಾಯುವಂತಾಗಿದೆ!

ಕರಾಚಿಯ ಬಹುದೂರಬಾದ್‌ ಪೊಲೀಸ್ ಠಾಣೆಯಲ್ಲಿ ತನಿಖಾಧಿಯಾಗಿರುವ ಆಮಿರ್‌ ಗೋಪಂಗ್‌ ಅವರ ಬ್ಯಾಂಕ್ ಖಾತೆಗೆ ಅವರ ವೇತನವೂ ಸೇರಿ 10 ಕೋಟಿ ರೂಪಾಯಿ (100 ಮಿಲಿಯನ್‌)ಅನಾಮಧೇಯ ಮೂಲದಿಂದ ಜಮಾ ಆಗಿದೆ. ಇದೇ ರೀತಿ ಈ ಮೊದಲು ಲರ್ಖಾನದ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಸುಕ್ಕೂರು ಠಾಣೆಯ ಒಬ್ಬ ಪೊಲೀಸ್ ಅಧಿಕಾರಿಯ ಬ್ಯಾಂಕ್ ಖಾತೆಗೆ 5 ಕೋಟಿ ರೂಪಾಯಿ (50 ಮಿಲಿಯನ್‌) ಜಮಾ ಆಗಿದ್ದು, ಎಲ್ಲ ಪ್ರಕರಣಗಳ ತನಿಖೆ ಆರಂಭವಾಗಿದೆ.

ಶನಿವಾರ ಆಮಿರ್ ಗೋಪಂಗ್‌ ಅವರ ಖಾತೆಗೆ ₹10 ಕೋಟಿ ಜಮಾ ಆಗಿದ್ದು, ಬ್ಯಾಂಕ್ ಅಧಿಕಾರಿಗಳು ಕರೆ ಮಾಡಿ ತಿಳಿಸಿದ ನಂತರವೇ ಹಣ ಜಮಾ ಆಗಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಬ್ಯಾಂಕ್‌ ಅಧಿಕಾರಿಗಳು ಆಮಿರ್ ಅವರ ಖಾತೆ ಹಾಗೂ ಎಟಿಎಂ ಬ್ಲಾಕ್‌ ಮಾಡಿ, ತನಿಖೆ ಆರಂಭಿಸಿದ್ದಾರೆ.

ADVERTISEMENT

‘ಒಮ್ಮೆಲೇ ನನ್ನ ಖಾತೆಯಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ನೋಡಿ ನನಗೆ ಆಶ್ಚರ್ಯವಾಯಿತು. ಸಾಮಾನ್ಯವಾಗಿ ನನ್ನ ಖಾತೆಯಲ್ಲಿ ಕೆಲ ಸಾವಿರ ರೂಪಾಯಿ ಮಾತ್ರ ಇರುತ್ತಿತ್ತು‘ ಎಂದು ಆಮಿರ್‌ ಗೋಪಂಗ್‌ ಹೇಳಿದ್ದಾರೆ.

ಇಷ್ಟು ದೊಡ್ಡ ಮೊತ್ತದ ಹಣ ಯಾವ ಮೂಲದಿಂದ ಬಂದಿದೆ ಎಂದು ಯಾವ ಅಧಿಕಾರಿಗೂ ತಿಳಿದಿಲ್ಲ ಎನ್ನಲಾಗಿದ್ದು, ತನಿಖೆ ನಂತರ ಸತ್ಯ ಹೊರಬೀಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.