ಇಸ್ಲಾಮಾಬಾದ್: ಭಾರತದ ಯುದ್ಧ ವಿಮಾನವನ್ನು ಫೆಬ್ರುವರಿ 27ರಂದು ಹೊಡೆದುರುಳಿಸಲು ಎಫ್–16 ಬಳಸಲಾಗಿತ್ತು ಎನ್ನುವುದನ್ನು ಪಾಕಿಸ್ತಾನ ಇದೇ ಪ್ರಥಮ ಬಾರಿ ಪರೋಕ್ಷವಾಗಿ ಒಪ್ಪಿಕೊಂಡಿದೆ.
‘ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ವಾಯು ಪಡೆಯು ಜೆಎಫ್–17ನಿಂದ ನಮ್ಮ ವಾಯು ಪ್ರದೇಶದಿಂದಲೇ ದಾಳಿ ನಡೆಸಲಾಗಿತ್ತು. ಬಳಿಕ, ಭಾರತದ ಎರಡು ಜೆಟ್‌ಗಳು ಗಡಿನಿಯಂತ್ರಣ ರೇಖೆ ದಾಟಿದಾಗ ಪಾಕಿಸ್ತಾನ ವಾಯು ಪಡೆ ಪ್ರತಿ ದಾಳಿ ನಡೆಸಿ ಹೊಡೆದುರುಳಿಸಿತು. ಪ್ರತಿ ದಾಳಿ ನಡೆಸಿದ್ದು ಎಫ್–16 ಅಥವಾ ಜೆಎಫ್–17 ಎನ್ನುವುದು ಮುಖ್ಯವಲ್ಲ‘ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಅಸೀಫ್ ಘಪೂರ್ ತಿಳಿಸಿದ್ದಾರೆ.
ಕೇವಲ ಜೆಎಫ್–17 ಮಾತ್ರ ಬಳಸಲಾಗಿತ್ತು ಎಂದು ಘಪೂರ್ ಕಳೆದ ತಿಂಗಳು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.