ADVERTISEMENT

ನವಾಜ್‌ ಷರೀಫ್‌ ವಿರುದ್ಧ ಹೊಸ ಪ್ರಕರಣಕ್ಕೆ ಅನುಮೋದನೆ

ಪಿಟಿಐ
Published 23 ಅಕ್ಟೋಬರ್ 2020, 10:43 IST
Last Updated 23 ಅಕ್ಟೋಬರ್ 2020, 10:43 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಾಲಿ ಪ್ರಧಾನಿ ಇಮ್ರಾನ್‌ ಖಾನ್‌ ಒತ್ತಾಯಿಸಿರುವ ಬೆನ್ನಲ್ಲೇ ನವಾಜ್‌ ಷರೀಫ್‌ ವಿರುದ್ಧ ಹೊಸ ಪ್ರಕರಣಕ್ಕೆ ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ದಳ ಅನುಮೋದನೆ ನೀಡಿದೆ.

ವಿದೇಶಿ ಗಣ್ಯರ ಸುರಕ್ಷತೆಗಾಗಿ 73 ಭದ್ರತಾ ವಾಹನಗಳ ಅಕ್ರಮ ಖರೀದಿ ಮತ್ತು ಬೊಕ್ಕಸಕ್ಕೆ ₹195.2 ಕೋಟಿ ನಷ್ಟ ಉಂಟು ಮಾಡಿದ ಆರೋಪದಡಿ ಷರೀಫ್‌, ಚೌಧರಿ, ಸುಲ್ತಾನ್ ಮತ್ತು ಫವಾದ್ ಸೇರಿದಂತೆ ಹಲವರ ವಿರುದ್ಧ ಹೊಸ ಪ್ರಕರಣಕ್ಕೆ ಅನುಮೋದನೆ ನೀಡಲಾಗಿದೆ.

2017ರಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ ಭ್ರಷ್ಟಾಚಾರ ಪ್ರಕರಣದಡಿ ಪಿಎಂಎಲ್‌ –ಎನ್‌ ಮುಖ್ಯಸ್ಥ ನವಾಜ್‌ ಷರೀಫ್ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿತು. ಕಳೆದ ವರ್ಷ ನವೆಂಬರ್‌ನಿಂದ ಷರೀಫ್‌ ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಎಂಟು ವಾರಗಳ ಕಾಲ ಲಂಡನ್‌ಗೆ ತೆರಳಲು ನ್ಯಾಯಾಲಯ ಮತ್ತು ಸರ್ಕಾರ ಅನುಮತಿ ನೀಡಿತ್ತು. ಆದರೆ, ಅವರು ಇನ್ನೂ ಹಿಂತಿರುಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.