ADVERTISEMENT

ನವಾಜ್ ಷರೀಫ್‌ಗೆ ಜಾಮೀನು

ಪಿಟಿಐ
Published 25 ಅಕ್ಟೋಬರ್ 2019, 19:21 IST
Last Updated 25 ಅಕ್ಟೋಬರ್ 2019, 19:21 IST
ನವಾಜ್ ಷರೀಫ್‌
ನವಾಜ್ ಷರೀಫ್‌   

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ಲಾಹೋರ್ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಅನಾರೋಗ್ಯಕ್ಕೊಳಗಾಗಿರುವ ನವಾಜ್‌ ಅವರಿಗೆ ವೈದ್ಯಕೀಯ ಕಾರಣಗಳ ಮೇಲೆ ಜಾಮೀನು ದೊರೆತಿದೆ.

ತಮ್ಮ ಅಣ್ಣನನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ (ಎನ್‌ಎಬಿ)ವಶದಿಂದ ಬಿಡುಗಡೆ ಮಾಡಬೇಕು ಎಂಬ ಪಿಎಂಎಲ್‌–ಎನ್‌ ಅಧ್ಯಕ್ಷ ಶಹಬಾಜ್ ಷರೀಫ್‌ ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಬಾಗರ್‌ ನಜಾಫಿ ನೇತೃತ್ವದ ಪೀಠ ಜಾಮೀನು ನೀಡಿತು.

ಅಲ್ ಅಝೀಜಿಯಾ ಸ್ಟೀಲ್‌ ಮಿಲ್‌ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಮುಂದಕ್ಕೆ ಹಾಕಿರುವ ಕಾರಣ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ದೊರೆತಿದ್ದರೂ ಷರೀಫ್‌ ಅವರಿಗೆ ಬಿಡುಗಡೆ ಅವಕಾಶ ದೊರೆತಿರಲಿಲ್ಲ.

ADVERTISEMENT

ಷರೀಫ್‌ ಪರ ವಾದ ಮಂಡಿಸಿದ್ದ ವಕೀಲ ಅಸ್ತರ್‌ ಅಸಫ್‌ ಅವರು, ‘ನಮ್ಮ ಕಕ್ಷಿದಾರರ ಆರೋಗ್ಯಸ್ಥಿತಿ ತುಂಬಾ ಬಿಗಡಾಯಿಸಿರುವ ಕಾರಣ ಜಾಮೀನು ನೀಡಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.