ADVERTISEMENT

ಭಯೋತ್ಪಾದಕ ಸಂಘಟನೆ ಜೆಯುಡಿ ಉಪನಾಯಕ ಅಬ್ದುಲ್ ರೆಹಮಾನ್ ಮಕ್ಕಿ ಸಾವು

ಪಿಟಿಐ
Published 27 ಡಿಸೆಂಬರ್ 2024, 10:37 IST
Last Updated 27 ಡಿಸೆಂಬರ್ 2024, 10:37 IST
   

ಲಾಹೋರ್: 2006ರ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ಅವರ ಸಂಬಂಧಿ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ಜಮಾತ್-ಉದ್-ದವಾ(ಜೆಯುಡಿ) ಉಪ ನಾಯಕ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಅವರು ಇಂದು ಹೃದಯಸ್ತಂಭನದಿಂದ ಮೃತಪಟ್ಟಿದ್ದಾನೆ.

ಜೆಯುಡಿ ಪ್ರಕಾರ, ಅಬ್ದುಲ್ ರಹಮಾನ್ ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಮಧುಮೇಹ ಸಮಸ್ಯೆ ಬಿಗಡಾಯಿಸಿದ್ದರಿಂದ ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು.

‘ಮಕ್ಕಿಗೆ ಬೆಳಗ್ಗೆ ಹೃದಯಸ್ತಂಭನವಾಗಿದೆ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ’ಎಂದು ಜೆಯುಡಿ ತಿಳಿಸಿದೆ.

ADVERTISEMENT

ಮಕ್ಕಿಗೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ 2020ರಲ್ಲಿ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ಮಕ್ಕಿ ಪಾಕಿಸ್ತಾನ ಸಿದ್ಧಾಂತದ ಪ್ರತಿಪಾದಕರಾಗಿದ್ದರು ಎಂದು ಪಾಕಿಸ್ತಾನದ ಮುತಾಹಿದ ಮುಸ್ಲಿಂ ಲೀಗ್(ಪಿಎಂಎಂಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

2023ರಲ್ಲಿ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು. ಈ ಸಂಬಂಧ ಆತನ ಆಸ್ತಿ ಮುಟ್ಟುಗೋಲು, ಸಂಚಾರ ಮತ್ತು ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ ಹೇರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.