ADVERTISEMENT

ಇಮ್ರಾನ್‌ ಖಾನ್‌, ಪತ್ನಿ ವಿರುದ್ಧ ದೋಷಾರೋಪ ನಿಗದಿ

ಪಿಟಿಐ
Published 27 ಫೆಬ್ರುವರಿ 2024, 12:41 IST
Last Updated 27 ಫೆಬ್ರುವರಿ 2024, 12:41 IST
ಇಮ್ರಾನ್‌ ಖಾನ್‌ 
ಇಮ್ರಾನ್‌ ಖಾನ್‌    

ಇಸ್ಲಾಮಾಬಾದ್‌ (ಪಿಟಿಐ): ಬಂಧನದಲ್ಲಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರ ವಿರುದ್ಧ ಅಲ್–ಖಾದಿರ್ ಟ್ರಸ್ಟ್‌  ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್‌ ಅಕೌಂಟೆಬಿಲಿಟಿ ಬ್ಯುರೊ(ಎನ್‌ಎಬಿ) ನ್ಯಾಯಾಲಯವು ದೋಷಾರೋಪ ನಿಗದಿ ಮಾಡಿದೆ.

ಇಮ್ರಾನ್‌ ಖಾನ್‌ ಇರುವ ರಾವಲ್ಪಿಂಡಿಯ ಆಡಿಯಾಲ ಕಾರಾಗೃಹದಲ್ಲಿಯೇ ನ್ಯಾಯಾಧೀಶ ನಾಸಿರ್‌ ಜಾವೇದ್‌ ರಾಣಾ ಅವರು ವಿಚಾರಣೆ ನಡೆಸಿದರು. ನಂತರ ದಂಪತಿ ಸಮಕ್ಷಮದಲ್ಲಿ ದೋಷಾರೋಪ ಪಟ್ಟಿ ಓದಿದರು.

ಖಾನ್‌ ಮತ್ತು ಅವರ ಪತ್ನಿ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದರು. ನಂತರ ಪ್ರಕರಣದ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಲಾಯಿತು.

ADVERTISEMENT

ಇಮ್ರಾನ್‌ ಖಾನ್ ಮತ್ತು ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಅವರು 2018ರಲ್ಲಿ ಸ್ಥಾಪಿಸಿದ್ದ ಅಲ್–ಖಾದಿರ್ ಸರ್ಕಾರೇತರ ಸಂಸ್ಥೆಯು ರಿಯಲ್‌ ಎಸ್ಟೇಟ್ ಡೆವಲಪರ್‌ ಮಲಿಕ್‌ ರಿಯಾಜ್‌ ಹುಸೇನ್‌ ಅವರಿಂದ 60 ಎಕರೆ ಭೂಮಿಯನ್ನು ಲಂಚವಾಗಿ ಪಡೆದಿದೆ. ಆ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್‌ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.