ADVERTISEMENT

ಬ್ರಿಟನ್‌ನಿಂದ ನವಾಜ್‌ ಕರೆತರಲು ಪಾಕ್‌ ಯತ್ನ

ಭ್ರಷ್ಟಾಚಾರ ಆರೋಪ: ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆ ಬಾಕಿ

ಪಿಟಿಐ
Published 30 ಸೆಪ್ಟೆಂಬರ್ 2020, 12:05 IST
Last Updated 30 ಸೆಪ್ಟೆಂಬರ್ 2020, 12:05 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಇಸ್ಲಾಮಾಬಾದ್‌: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಎಂಎಲ್‌–ಎನ್‌ ಪಾರ್ಟಿ ವರಿಷ್ಠ ನವಾಜ್‌ ಷರೀಫ್‌ ಅವರನ್ನು ಬ್ರಿಟನ್‌ನಿಂದ ಕರೆತರುವ ಪ್ರಕ್ರಿಯೆಗೆ ಪಾಕಿಸ್ತಾನ ಸರ್ಕಾರ ಚಾಲನೆ ನೀಡಿದೆ.

ನವಾಜ್‌ ಷರೀಫ್‌ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಹಲವು ಪ್ರಕರಣಗಳು ದಾಖಲಾಗಿದ್ದು, ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆ ಬಾಕಿ ಇದೆ.

ವೈದ್ಯಕೀಯ ಚಿಕಿತ್ಸೆ ಕಾರಣವೊಡ್ಡಿ ಲಂಡನ್‌ನಲ್ಲಿ ವಾಸ ಮಾಡುತ್ತಿರುವ ಷರೀಫ್‌ ಅವರ ಗಡೀಪಾರಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಇಮ್ರಾನ್‌ ಖಾನ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು ಎಂದು ಡಾನ್‌ ನ್ಯೂಸ್‌ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.