ADVERTISEMENT

ಸಂಘರ್ಷ ತಗ್ಗಿಸಲು ಪಾಕಿಸ್ತಾನ, ಇರಾನ್ ಒಪ್ಪಿಗೆ: ಪಾಕ್ ವಿದೇಶಾಂಗ ಸಚಿವಾಲಯ

ಏಜೆನ್ಸೀಸ್
Published 19 ಜನವರಿ 2024, 16:29 IST
Last Updated 19 ಜನವರಿ 2024, 16:29 IST
<div class="paragraphs"><p>ಇರಾನ್ ಹಾಗೂ ಪಾಕಿಸ್ತಾನ ಧ್ವಜ </p></div>

ಇರಾನ್ ಹಾಗೂ ಪಾಕಿಸ್ತಾನ ಧ್ವಜ

   

ರಾಯಿಟರ್ಸ್ ಚಿತ್ರ

ಇಸ್ಲಾಮಾಬಾದ್: ಉಗ್ರರನ್ನು ಗುರಿಯಾಗಿರಿಸಿ ಉಭಯ ದೇಶಗಳು ನಡೆಸಿದ ಪರಸ್ಪರ ವಾಯು ದಾಳಿಯಿಂದ ನಿರ್ಮಾಣವಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಗ್ಗಿಸಲು ಪಾಕಿಸ್ತಾನ ಮತ್ತು ಇರಾನ್‌ ಒಪ್ಪಿವೆ ಎಂದು ಪಾಕ್‌ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ADVERTISEMENT

ಎರಡೂ ದೇಶಗಳ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ನಿಗ್ರಹ, ಪರಸ್ಪರ ಸಹಕಾರ ಮತ್ತು ಸಮನ್ವಯವನ್ನು ಬಲಪಡಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಾಕ್‌ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಪಾಕಿಸ್ತಾನದ ಜೈಶ್ ಅಲ್ ಅದ್ಲ್‌ ಉಗ್ರಗಾಮಿ ಸಂಘಟನೆಯ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇರಾನ್‌ನಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿಕೊಂಡಿದ್ದ ಪಾಕ್‌, ಆ ದೇಶದ ರಾಯಭಾರಿಯನ್ನು ವಜಾಗೊಳಿಸಿತ್ತು. ಬಳಿಕ, ಪ್ರತಿ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.