ADVERTISEMENT

ಪಾಕ್‌ ಪ್ರಧಾನಿಗೆ ಕೋವಿಡ್‌ ಪಾಸಿಟಿವ್‌

ಪಿಟಿಐ
Published 15 ನವೆಂಬರ್ 2022, 8:24 IST
Last Updated 15 ನವೆಂಬರ್ 2022, 8:24 IST
   

ಇಸ್ಲಾಮಾಬಾದ್‌: ಬ್ರಿಟನ್‌ ಪ್ರವಾಸದಿಂದ ಮರಳಿರುವ ಪಾಕಿಸ್ತಾನದ ಪ್ರಧಾನಿ ಶಾಹಬಾಝ್ ಷರೀಫ್‌ ಕೋವಿಡ್‌ಗೆ ತುತ್ತಾಗಿದ್ದಾರೆ ಎಂದು ಮಾಹಿತಿ ಸಚಿವ ಮರಿಯಂ ಔರಂಗಜೇಬ್‌ ಹೇಳಿದ್ದಾರೆ.

ಶಾಹಬಾಝ್ ಸೋಮವಾರ ಇಂಗ್ಲೆಂಡ್‌ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳಿದ್ದರು. ಲಂಡನ್‌ನಲ್ಲಿ ನಡೆದ ಸಿಒಪಿ27 ಹವಾಮಾನ ಸಮ್ಮೇಳನದಲ್ಲಿ ಅವರು ಭಾಗಿಯಾಗಿದ್ದರು. ಬಳಿಕ ಅವರ ಸಹೋದರನನ್ನು ಭೇಟಿಯಾಗಲು ಈಜಿಪ್ಟ್‌ಗೆ ಪ್ರಯಾಣಿಸಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಔರಂಗ್‌ಜೇಬ್‌, ಕಳೆದ 2 ದಿನಗಳಿಂದ ಪ್ರಧಾನಿ ಆರೋಗ್ಯ ಹದಗೆಟ್ಟಿದ್ದು, ವೈದ್ಯರು ಕೋವಿಡ್‌ ಪರೀಕ್ಷೆಗೆ ಸೂಚಿಸಿದ್ದರು. ಕೋವಿಡ್‌ ಪಾಸಿಟಿವ್‌ ವರದಿಯಾಗಿದೆ ಎಂದಿದ್ದಾರೆ. ಪ್ರಧಾನಿ ಶೀಘ್ರ ಚೇತರಿಕೆಗೆ ಪ್ರಾರ್ಥಿಸುವಂತೆ ಅವರು ಮನವಿ ಮಾಡಿದ್ದಾರೆ.

ADVERTISEMENT

ಶಾಹಬಾಝ್‌ಗೆ ಮೂರನೆ ಸಲ ಕೋವಿಡ್‌ ಪಾಸಿಟಿವ್‌ ಬಂದಿದೆ. 2020ರ ಜನವರಿ ಮತ್ತು ಜೂನ್‌ನಲ್ಲಿ ಅವರು ಕೋವಿಡ್‌ಗೆ ತುತ್ತಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.