ಪಾಕಿಸ್ತಾನ ಧ್ವಜ
ಲಾಹೋರ್: ‘ಭಾರತದ ವಾಯುಪಡೆಯ ದಾಳಿಯಿಂದ ನಾಶವಾಗಿದ್ದ ಮುರೀದ್ಕೆಯಲ್ಲಿರುವ ಜಮಾತ್–ಉದ್–ದಾವಾ (ಜೆಯುಡಿ) ಉಗ್ರ ಸಂಘಟನೆಯ ಕೇಂದ್ರ ಕಚೇರಿಯಾಗಿದ್ದ ಮಸೀದಿಯನ್ನು ಪುನಃ ನಿರ್ಮಾಣ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ’ ಎಂದು ಪಾಕಿಸ್ತಾನ ಮರ್ಕಜ್ ಮುಸ್ಲಿಂ ಲೀಗ್ (ಪಿಎಂಎಂಎಲ್) ಶನಿವಾರ ಹೇಳಿದೆ.
ಪಿಎಂಎಂಎಲ್ ಪಕ್ಷವು ‘ಜಮಾತ್–ಉದ್–ದಾವಾ’ ಸಂಘಟನೆಯ ರಾಜಕೀಯ ಸಂಘಟನೆಯಾಗಿದೆ. ‘ಆಪರೇಷನ್ ಸಿಂಧೂರ’ದಲ್ಲಿ ಭಾರತೀಯ ಸೇನೆಯು ಈ ಉಗ್ರ ಸಂಘಟನೆಗೆ ಸೇರಿದ ಮಸೀದಿಯನ್ನು ಧ್ವಂಸ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.