ADVERTISEMENT

ಪಾಕ್‌ನಲ್ಲಿ 2.79 ಲಕ್ಷ ಸೋಂಕಿತರು

ಪಿಟಿಐ
Published 2 ಆಗಸ್ಟ್ 2020, 8:04 IST
Last Updated 2 ಆಗಸ್ಟ್ 2020, 8:04 IST

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 553 ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ‍ಪತ್ತೆಯಾಗಿವೆ. ಇದರಿಂದಾಗಿ, ದೇಶದಲ್ಲಿ ಸೋಂಕಿತರ ಸಂಖ್ಯೆ 2,79,699ಕ್ಕೆ ಏರಿದೆ.

ಸೋಂಕಿನಿಂದ ಆರು ಮಂದಿ ಮತ್ತೆ ಮೃತಪಟ್ಟಿದ್ದಾರೆ. ಹೀಗಾಗಿ, ಸಾವಿಗೀಡಾದವರ ಸಂಖ್ಯೆ 5,976ಕ್ಕೇರಿದೆ ಎಂದು ರಾಷ್ಟ್ರೀಯ ಕಮಾಂಡ್‌ ಮತ್ತು ಕಾರ್ಯಾಚರಣೆ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಇದುವರೆಗೆ 2,48,577 ಮಂದಿ ಗುಣಮುಖರಾಗಿದ್ದು, 25,146 ಸಕ್ರಿಯ ಪ್ರಕರಣಗಳಿವೆ. ಪಾಕ್‌ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನದಲ್ಲಿ ಯಾವುದೇ ರೋಗಿಗೆ ವೆಂಟಿಲೇಟರ್‌ ಅಳವಡಿಸಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ದೇಶದಾದ್ಯಂತ 20.10 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 1,618 ರೋಗಿಗಳು 735 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.