ಇಸ್ಲಾಮಾಬಾದ್: ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದಕ್ಕಾಗಿ ‘12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ತೀರ್ಮಾನಿಸಿದ್ದೇವೆ‘ ಎಂದು ಪಾಕಿಸ್ತಾನದ ಯೋಜನಾ ಸಚಿವ ಅಸಾದ್ ಉಮರ್ ಮಂಗಳವಾರ ಪ್ರಕಟಿಸಿದ್ದಾರೆ.
ದೇಶದಾದ್ಯಂತ ಕೊರೊನಾ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿರುವ ನಡುವೆಯೇ ಮಕ್ಕಳಿಗೆ ಲಸಿಕೆ ನೀಡುವ ವಿಚಾರವನ್ನು ಅಸಾದ್ ಉಮರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಸರ್ಕಾರ ಶೀಘ್ರವೇ ಅಭಿಯಾನ ಆರಂಭಿಸಲಿದೆ ಎಂದು ಟ್ವೀಟ್ ಮಾಡಿರುವ ಉಮರ್, ಯಾವಾಗಿನಿಂದ ಅಭಿಯಾನ ಆರಂಭವಾಗುತ್ತದೆ ಎಂದು ನಿಖರವಾಗಿ ಹೇಳಿಲ್ಲ.
ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಪಾಕಿಸ್ತಾನದಾದ್ಯಂತ ಕೋವಿಡ್‌ನಿಂದ 41 ಸಾವುಗಳು ಸಂಭವಿಸಿವೆ. ಸುಮಾರು 1,400 ಪ್ರಕರಣಗಳು ವರದಿಯಾಗಿವೆ.
ಜುಲೈ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕೋವಿಡ್ ನಾಲ್ಕನೆಯ ಅಲೆಯ ನಡುವೆ, ದಿನಕ್ಕೆ 1,500 ಕ್ಕಿಂತ ಕಡಿಮೆ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.