ADVERTISEMENT

ಮುರಿದುಬಿದ್ದ ಪಾಕ್–ಅಫ್ಗನ್‌ ಶಾಂತಿ ಒಪ್ಪಂದ

ಪಿಟಿಐ
Published 9 ನವೆಂಬರ್ 2025, 15:07 IST
Last Updated 9 ನವೆಂಬರ್ 2025, 15:07 IST
<div class="paragraphs"><p>ಪಾಕ್‌–ಅಫ್ಗನ್‌ ಗಡಿಯ ಶೋರಾಬಕ್ ಜಿಲ್ಲೆಯ ಮಝಲ್‌ ಎಂಬಲ್ಲಿ ತಾಲಿಬಾನ್‌ ಭದ್ರತಾ ಪಡೆಗಳು ಭಾನುವಾರ ಗಸ್ತು ನಡೆಸಿದವು –</p></div>

ಪಾಕ್‌–ಅಫ್ಗನ್‌ ಗಡಿಯ ಶೋರಾಬಕ್ ಜಿಲ್ಲೆಯ ಮಝಲ್‌ ಎಂಬಲ್ಲಿ ತಾಲಿಬಾನ್‌ ಭದ್ರತಾ ಪಡೆಗಳು ಭಾನುವಾರ ಗಸ್ತು ನಡೆಸಿದವು –

   

ಇಸ್ಲಾಮಾಬಾದ್‌: ಇಸ್ತಾಂಬುಲ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ–ಅಫ್ಗಾನಿಸ್ತಾನ ನಡುವಣ ಶಾಂತಿ ಒಪ್ಪಂದ ಮಾತುಕತೆಯು  ಮುರಿದುಬಿದ್ದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಎರಡೂ ದೇಶಗಳು ಪರಸ್ಪರ ಆರೋಪಿಸಿದ ಕಾರಣ ಮಾತುಕತೆ ಅರ್ಧಕ್ಕೇ ಮೊಟಕುಗೊಂಡಿದೆ. ಇದು ಉಭಯ ದೇಶಗಳ ನಡುವಣ ಗಡಿ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ.

ADVERTISEMENT

ಎರಡೂ ದೇಶಗಳು ಗಡಿಯಲ್ಲಿ ನಡೆಸಿದ ಸಂಘರ್ಷದಿಂದ ಹಲವು ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಅಕ್ಟೋಬರ್‌ 19ರಂದು ಕತಾರ್‌ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಶಾಶ್ವತ ಕದನ ವಿರಾಮ ಘೋಷಿಸುವ ನಿಟ್ಟಿನಲ್ಲಿ ಇಸ್ತಾಂಬುಲ್‌ನಲ್ಲಿ ಮೂರನೇ ಸುತ್ತಿನ ಮಾತುಕತೆಯನ್ನು ನಡೆಸಲಾಗುತ್ತಿತ್ತು.

‘ಮಾತುಕತೆ ಮುರಿದು ಬೀಳಲು ಪಾಕಿಸ್ತಾನವೇ ಕಾರಣ. ಅದರ ಬೇಡಿಕೆಗಳು ಸೂಕ್ತವಾಗಿಲ್ಲ’ ಎಂದು ಅಫ್ಗನ್ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹೀದ್‌ ಆರೋಪಿಸಿದ್ದಾರೆ.

‘ಯುದ್ಧ ನಮ್ಮ ಮೊದಲ ಆಯ್ಕೆ ಅಲ್ಲ. ಆದರೆ ಯುದ್ಧ ಆರಂಭಿಸಿದರೆ ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.