ADVERTISEMENT

ಸಿಂಗಪುರ ಚುನಾವಣೆ: ಪ್ರಧಾನಿ ಲಾರೆನ್ಸ್ ವಾಂಗ್‌ ನೇತೃತ್ವದ ಪಕ್ಷಕ್ಕೆ ಮತ್ತೆ ಬಹುಮತ

ಪಿಟಿಐ
Published 4 ಮೇ 2025, 13:56 IST
Last Updated 4 ಮೇ 2025, 13:56 IST
<div class="paragraphs"><p>ಲಾರೆನ್ಸ್ ವಾಂಗ್‌ </p></div>

ಲಾರೆನ್ಸ್ ವಾಂಗ್‌

   

ಸಿಂಗಪುರ: ಜಾಗತಿಕ ಆರ್ಥಿಕ ಅನಿಶ್ಚಿತತೆ ಮಧ್ಯೆಯೇ ಸಿಂಗಪುರದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಲಾರೆನ್ಸ್‌ ವಾಂಗ್‌ ನೇತೃತ್ವದ ಪೀಪಲ್ಸ್‌ ಆ್ಯಕ್ಷನ್‌ ಪಕ್ಷ (ಪಿಎಪಿ) ಮತ್ತೆ ಭರ್ಜರಿ ಬಹುಮತ ಪಡೆದಿದೆ.

ಶನಿವಾರ (ಮೇ 3) ನಡೆದ ಚುನಾವಣೆಯಲ್ಲಿ ಒಟ್ಟು 97 ಕ್ಷೇತ್ರಗಳ ಪೈಕಿ 87ರಲ್ಲಿ ಪಿಎಪಿ ಗೆದ್ದು, ಸರ್ಕಾರ ರಚನೆಗೆ ಮುಂದಾಗಿದೆ.

ADVERTISEMENT

ಪಿಎಪಿ 23,86,452 ಮತಗಳನ್ನು ಪಡೆಯುವ ಮೂಲಕ ಚಲಾವಣೆಯಾದ ಒಟ್ಟು ಮತದಲ್ಲಿ ಶೇ 65.57ರಷ್ಟನ್ನು ಪಡೆದಿದೆ. 2024ರ ಚುನಾವಣೆಯಲ್ಲಿ ಶೇ 61.24ರಷ್ಟು ಮತವನ್ನು ಪಡೆದಿತ್ತು. ಸಿಂಗಪುರದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಪಿಎಪಿ 1965ರಿಂದಲೂ ಅಧಿಕಾರದಲ್ಲಿದೆ.

ಪ್ರಬಲ ವಿರೋಧ ಪಕ್ಷವಾದ ‘ದಿ ವರ್ಕರ್ಸ್‌ ಪಕ್ಷ’ವು (ಡಬ್ಲ್ಯುಪಿ) 10 ಸಂಸತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಸ್ವಾತಂತ್ರ್ಯಾ ನಂತರದ 14ನೇ ಸಾರ್ವತ್ರಿಕ ಚುನಾವಣೆಯಲ್ಲಿ 24,29,281 ಮತಗಳು ಚಲಾವಣೆಯಾಗಿದ್ದವು.

ಫಲಿತಾಂಶ ಘೋಷಣೆಯಾದ ಬಳಿಕ ಮಾತನಾಡಿದ ವಾಂಗ್‌, ‘ದೇಶದ ಸಮೃದ್ಧಿಗಾಗಿ ಕೆಲಸ ಮಾಡಿದ ಪಕ್ಷಕ್ಕೆ ಸಿಂಗಪುರದ ಜನರು ಮತ್ತೆ ಬಹುಮತ ನೀಡಿದ್ದಾರೆ.  ಪ್ರಬಲ ಪ್ರತಿಸ್ಪರ್ಧೆ ಇರುವುದು ರಾಜಕೀಯ ಪಕ್ಷಗಳ ಮಧ್ಯೆ ಅಲ್ಲ, ಸಿಂಗಪುರ ಮತ್ತು ಅದರ ಎದುರಿಗಿರುವ ಸವಾಲುಗಳ ಮಧ್ಯೆ’ ಎಂದು ಒತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.